ತಂದೆಯ ಸ್ಮರಣಾರ್ಥ ಸರಕಾರಿ ಶಾಲೆಗೆ 50 ಊಟದ ತಟ್ಟೆಗಳ ದೇಣಿಗೆ

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ, ಜುಲೈ. 20 ಪಟ್ಟಣದ ಹಳೆ ಊರಿನ  ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಹೊನ್ನೂರ್ ಅಲಿ ಇಂದು  ಅವರು ತಮ್ಮ ತಂದೆ ದಿವಂಗತ ಫಕೃದ್ದೀನ್ ಅವರ ಸ್ಮರಣಾರ್ಥವಾಗಿ 50 ಊಟದ ತಟ್ಟೆಗಳನ್ನು ಇಂದು ದೇಣಿಗೆಯಾಗಿ  ನೀಡಿದರು.. 
ದಿವಂಗತ ಫಕೃದ್ದೀನ್ ಅವರು ಇಲ್ಲಿನ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ನೆನಪಿಗಾಗಿ  ಇವರ ಮಗ ಹೊನ್ನೂರ್ ಅಲಿ ಪ್ರಸ್ತುತ ಹೂವಿನ ಹಡಗಲಿಯ ಸಿಡಿಪಿಓ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇಂದು ಬೆಳಗ್ಗೆ ಶಾಲೆಯ ಪ್ರಾರ್ಥನೆಯ ಸಂದರ್ಭದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಮ್ಮ ತಾಯಿ ಫೀರ್ಮಾಭೀ ಅವರ ಮೂಲಕ ಶಾಲಾ ಮುಖ್ಯ ಗುರುಗಳಿಗೆ 50 ತಟ್ಟೆಗಳನ್ನು ಹಸ್ತಾಂತರ ಮಾಡಿಸಿದರು. ತಟ್ಟೆಗಳ ಮೊತ್ತ ಅಂದಾಜು 3000 ರೂಪಾಯಿಗಳಾಗಿವೆ.
ದಾನಿ ಕುಟುಂಬದವರಿಗೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಯು ಎಸ್ ಕೊಟ್ರೇಶ್ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು..