ವಿಜಯಪುರ ,ಜು 11: ಸಲಿಕೆಯಿಂದ ಹೊಡೆದು ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ನಡೆದಿದೆ.
38 ವರ್ಷದ ಮುತ್ತಪ್ಪ ಮಸಳಿ ಹತ್ಯೆಯಾಗಿರುವ ದುರ್ದೈವಿ.ತಂದೆ ಬಸಪ್ಪ ಮಸಳಿ ಹತ್ಯೆ ಮಾಡಿರುವ ಆರೋಪಿ.
ಮದ್ಯ ಕುಡಿಯುವದನ್ನು ಬಿಡುವಂತೆ ಮಗ ಮುತ್ತಪ್ಪಗೆ ತಂದೆ ಬಸಪ್ಪ ಬುದ್ಧಿವಾದ ಹೇಳುತ್ತಿದ್ದ .ಆದರೆ ಮಾತು ಕೇಳದೇ ಜಮೀನಿನಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಮದ್ಯ ಸೇವೆ ಮಾಡುತ್ತಿದ್ದ .ಇದರಿಂದ ಕೆರಳಿದ ತಂದೆ ಮಗನನ್ನು ಹತ್ಯೆಗೈದಿದ್ದಾನೆ
ವಿಜಯಪುರ ಗ್ರಾಮೀಣ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.