ತಂದೆಯವರ ಕಾಲದಿಂದಲೂ ಬಳ್ಳಾರಿಗೂ ನಮಗೂ ಅವಿನಾಭಾವ ಸಂಬಂಧ: ಪುನಿತ್

ಬಳ್ಳಾರಿ ಮಾ 22 : ‌ನಮ್ಮ ತಂದೆ ರಾಜಕುಮಾರ್ ಅವರ ಕಾಲದಿಂದಲೂ ಬಳ್ಳಾರಿಗೂ ನಮಗೂ ಅವಿನಾಭಾವ ಸಂಬಂಧ ಇದೆ. ಅಪ್ಪಾಜಿ ಹೆಸರಲ್ಲಿ ಬಳ್ಳಾರಿಯಲ್ಲಿ ಪಾರ್ಕ್ ಕೂಡಾ ಇದೆ. ಸಾಕಷ್ಟು ಸಮಾಜ ಸೇವೆ ಅಪ್ಪಾಜಿ ಹೆಸರಲ್ಲಿ ಇಲ್ಲಿನ ಜನರು ಮಾಡ್ತಾರೆಂದು ನಟ ಪುನಿತ್ ರಾಜಕುಮಾರ್ ಹೇಳಿದ್ದಾರೆ.
ಅವರು ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಅರಸು, ಪವರ್ ಸಿನಿಮಾ ಆಡಿಯೋವನ್ನು ಬಳ್ಳಾರಿಯಲ್ಲಿ ರಿಲೀಸ್ ಆಗಿದೆ.
ದೊಡ್ಡಮನೆ ಹುಡುಗ ಸೇರಿದಂತೆ ಹಲವಾರು ಚಿತ್ರಗಳನ್ನು ಬಳ್ಳಾರಿಯಲ್ಲಿ ಶೂಟಿಂಗ್ ನಡೆದಿದೆ ಎಂದರು.
ಯುವರತ್ನ ‌ಚಿತ್ರ ಏಪ್ರಿಲ್ ಒಂದ ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಗುಲಬರ್ಗಾ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಪ್ರಚಾರದ ವೇಳೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಂದು
ಬಳ್ಳಾರಿಯಲ್ಲಿಯೂ ಸಹ ಉತ್ತಮ ಸ್ಪಂದನೆ ದೊರೆತಿದೆ.ವಜನ ನನ್ನನ್ನು ತುಂಬಾ ಪ್ರೀತಿ ಮಾಡುತ್ತಾರೆ.
ದುರ್ಗಮ್ಮ ದೇವಸ್ಥಾನ ದರ್ಶನ ಪಡೆದಿರುವೆ ನನಗೂ ನನ್ನ ಸಿನಿಮಾಕ್ಕೂ ಆಶೀರ್ವಾದ ಮಾಡಿದ್ದಾರೆ. ಬಳ್ಳಾರಿ ಜನರು ನನ್ನ ಮತ್ತು ನಮ್ಮ ಕುಟುಂಬವನ್ನು ಹೆಚ್ಚು ಪ್ರೀತಿ ಮಾಡುತ್ತಾರೆಂದರು.
ಚಿತ್ರಮಂದಿರಕ್ಕೆ ಬಂದು ಸರ್ಕಾರ ಪ್ರಕಟಿಸಿರುವ ಕರೋನಾ ನಿಯಮ ಪಾಲಿಸಿ ಸಿನಿಮಾ ನೋಡಿ ಎಂದು ಮನವಿ ಮಾಡಿದರು.