ತಂದೆಯನ್ನೇ ಕೊಂದ ಮಗ

ವಿಜಯಪುರಫೆ.16:ಕ್ಷುಲ್ಲಕ ಕಾರಣಕ್ಕೆ ಪುತ್ರನೊಬ್ಬ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಗರದ ಹಮಾಲರ ಕಾಲೋನಿಯಲ್ಲಿ ನಡೆದಿದೆ.
ಮರಳಪ್ಪ ತಳಗೇರಿ (45) ಕೊಲೆಗೀಡಾದ ವ್ಯಕ್ತಿ.
ಮರಳಪ್ಪ ತಳಗೇರಿ ಈತ ದಿನಾಲು ಮದ್ಯ ಸೇವಿಸಿ ಬಂದು ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದ. ಇದರಿಂದ ರೋಸಿ ಹೋದ ಪುತ್ರ ರಾಜು ಎಂಬವನು ತಂದೆಯನ್ನು ಹತ್ಯೆ ಮಾಡಿ, ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋಳಗುಮ್ಮಟ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.