ತಂದೆಯನ್ನೇ ಕುಡುಗೋಲಿನಿಂದ ಕೊಚ್ಚಿಕೊಂದ ಮಗ

Woan hand with knife against man

ಬೆಳಗಾವಿ,ನ.4- ಹೆತ್ತ ತಂದೆಯನ್ನೇ ಮಗನೇ ಕೊಲೆಗೈದಿರುವ ಘಟನೆ ಖಾನಾಪುರ ತಾಲೂಕಿನ ಬೇಡರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಬೇಡರಹಟ್ಟಿಯ ಕಲ್ಲಪ್ಪ ಪೂಜಾರಿ (51) ಕೊಲೆಯಾದವರು.ಕೃತ್ಯ ನಡೆಸಿದ ಪುತ್ರ ಯಲ್ಲಪ್ಪ (35)ನನ್ನು ಪೊಲೀಸರು ಬಂಧಿಸಿದ್ದಾರೆ.
ಯಲ್ಲಪ್ಪ ನಿತ್ಯ ಕುಡಿದು ಬಂದು ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದು . ಇದರಿಂದ ರೋಸಿ ಹೋದ ಯಲ್ಲಪ್ಪನ ಪತ್ನಿ ಮಾವ ಕಲ್ಲಪ್ಪನ ಗಮನಕ್ಕೆ ತಂದಿದ್ದಾಳೆ. ಇಂದು ಕೂಡ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದಾಗ ತಂದೆ ಕಲ್ಲಪ್ಪ ಬಿಡಿಸಲು ಬಂದಿದ್ದಾನೆ.
ಆಗ ಕೈಗೆ ಸಿಕ್ಕ ಕುಡುಗೋಲಿನಿಂದ ತಂದೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಮೃತ ಕಲ್ಲಪ್ಪ ಇಬ್ಬರನ್ನು ವಿವಾಹವಾಗಿದ್ದು, ಆರೋಪಿ ಯಲ್ಲಪ್ಪ ಎರಡನೇ ಹೆಂಡತಿಯ ಪುತ್ರ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಖಾನಾಪುರ ತಾಲೂಕಿನ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.