ತಂದೆತಾಯಿ ಹಾಗೂ ಶಾಲಾ ಶಿಕ್ಷಕರ ನಡವಳಿಕೆ ಸಂಸ್ಕಾರಯುತವಾಗಬೇಕು : ಮೃಣಾಲಿನಿ ದೇಶಪಾಂಡೆ

ಅಥಣಿ : ಮಾ.26:ಒತ್ತಡ ರಹಿತ ವಾತಾವರಣದಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಈ ಶಾಲೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಿಕ್ಷಕಿ ಹಾಗೂ ಸಾಹಿತಿ ಡಾ.ಅರ್ಚನಾ ಅಥಣಿ ಹೇಳಿದರು
ಅವರು ಸ್ಥಳೀಯ ಮಿರಜ ಎಜುಕೇಶನ್ ಟ್ರಸ್ಟನ ಸ್ಪಾರ್ಕಲಿಂಗ್ ಕಿಡ್ಸ ಮಾಂಟೆಸರಿಯ “ಮಾತೃವಂದನಾ” ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಪುಸ್ತಕಗಳ ಅಭ್ಯಾಸದೊಂದಿಗೆ ಸಂಸ್ಕಾರಗಳ ಬೆಗೆಗೆಯೂ ತಿಳುವಳಿಕೆ ಕೊಡುವುದು ಅವಶ್ಯಕ ತಂದೆ ತಾಯಿ ಗುರುಹಿರಿಯರ ಬಗೆಗಿನ ಗೌರವ, ಶಾಲೆಯ ಶಿಕ್ಷಕರೊಂದಿಗೆ ಅವರು ಬೆರೆಯುವ ರೀತಿ ಎಲ್ಲವನ್ನೂ ಸಹ ತಿಳಿಸಕೊಡಬೇಕು ಇದರಿಂದ ಮಕ್ಕಳಿಗೆ ತಾವು ಕಲಿಯುತ್ತಿರುವ ವಿದ್ಯೆಯ ಮಹತ್ವ ಅರಿವಾಗುತ್ತದೆ. ಮಕ್ಕಳು ಕಲಿಕೆಯ ಮೊದಲ ಹಂತದಲ್ಲಿ ಸ್ವಚ್ಛವಾದ ಮನಸ್ಸಿನಿಂದ, ಶುದ್ಧ ಅಂತಃಕರಣದಿಂದ ಶಾಲೆಗೆ ಬಂದಿರುತ್ತಾರೆ, ಅವರಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಹಾಗೂ ಒಳ್ಳೆಯ ಗುಣಗಳನ್ನು ಅಳವಡಿಸಿದಲ್ಲಿ ಮುಂದೆ ಅವರು ಅತ್ಯುತ್ತಮ ನಾಗರಿಕರಾಗ ರೂಪುಗೊಳ್ಳುತ್ತಾರೆ ಎಂದ ಅವರು ಮಾತೃವಂದನ ಕಾರ್ಯಕ್ರಮದ ಮಹತ್ವವೇ ಮಕ್ಕಳಿಗೆ ತಾಯಿಯ ಬಗೆಗೆ ಇರಬೇಕಾದ ಪ್ರೀತಿ ವಾತ್ಸಲ್ಯ ಮಮತೆಯೊಂದಿಗೆ ತಾಯಿಯಿಂದ ದೊರೆತ ಆದರ್ಶಗಳನ್ನೂ ಸಹ ಮೈಗೂಡಿಸಿಕೊಳ್ಳಬೇಕು ಎನ್ನುವುದು, ಇಂತಹ ಸುಂದರ ಕಾರ್ಯಕ್ರಮ ಮಕ್ಕಳಲ್ಲಿ ಅಚ್ಚಳಿಯದೇ ಉಳಿಯುತ್ತದೆ ಎಂದರು.
ಈ ವೇಳೆ ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ ಮಾತನಾಡಿ ಪ್ರತಿನಿತ್ಯದ ಜೀವನದಲ್ಲಿನ ನಮ್ಮ ನಡುವಳಿಕೆಗಳು ಮಕ್ಕಳ ಮೇಲೆ ಗಾಢ ಪ್ರಭಾವ ಬೀರುತ್ತವೆ, ನಾವು ಮನೆಯಲ್ಲಿ ಆಚರಿಸುವ ಕ್ರಮಗಳನ್ನು ಮಕ್ಕಳು ಅನುಸರಿಸುತ್ತಾರೆ, ಮಕ್ಕಳು ಹೇಳಿದ್ದನ್ನು ಕೇಳಿ ಕಲಿಯುವುದಕ್ಕಿಂತ ನಾವು ಮಾಡಿದ್ದನ್ನು ನೋಡಿ ಅದನ್ನು ತಮ್ಮಲ್ಲಿ ಅಳವಡಿಸಕೊಂಡು ಕಲಿಯುತ್ತಾರೆ ಆದ್ದರಿಂದ ತಂದೆ ತಾಯಿಗಳೇ ಆಗಲಿ, ಶಾಲಾ ಶಿಕ್ಷಕರೇ ಆಗಲಿ ತಮ್ಮ ನಡವಳಿಕೆಯಲ್ಲಿ ಮಕ್ಕಳು ತಮ್ಮನ್ನು ಗಮನಿಸುತ್ತಿದ್ದಾರೆ ಎನ್ನುವ ಎಚ್ಚರಿಕೆಯಿಂದ ಇರಬೇಕು ಎಂದ ಅವರು ನಮ್ಮ ನಡವಳಿಕೆ ಸಂಸ್ಕಾರಯುತವಾಗಿದ್ದಲ್ಲಿ ಮಕ್ಕಳೂ ಸಹ ಸುಸಂಸ್ಕøತ ನಡುವಳಿಕೆಯವರಾಗುತ್ತಾರೆ, ಆದ್ದರಿಂದ ನಾವೆಲ್ಲ ವೇಗವಾಗಿ ಹೋಗುತ್ತಿರುವ ಈ ಜಗತ್ತಿನಲ್ಲಿ ಸಂಸ್ಕೃತಿ ಕಳೆದುಕೊಳ್ಳದೆ ನಮ್ಮ ಭದ್ರವಾದ ಬೇರುಗಳನ್ನು ಹಿಡಿದುಕೊಂಡು ಬೆಳೆಯುವಂತೆ ಮಕ್ಕಳನ್ನು ಪೆÇ್ರೀತ್ಸಾಹಿಸಬೇಕು ಎಂದರು.
ಮಿರಜ ಎಜುಕೇಶನ್ ಟ್ರಸ್ಟನ ಡಾ.ಪ್ರಮೋದ ಮಿರಜ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಶ್ರೀಮತಿ ಸುಮೇಧಾ ಮಿರಜ ಹಾಗೂ ಡಾ.ಸಚೀನ ಮಿರಜ ಪರಿಚಯಿಸಿದರು, ಡಾ.ನೀರಧಿ ಮಿರಜ ವಂದಿಸಿದರು, ನಾಗಾರ್ಜುನ ಕರ್ನಾಟಕಂ ಸೇರಿದಂತೆ ಶಿಕ್ಷಕ ವೃಂದ, ಪೆÇೀಷಕರು, ಹಿತೈಷಿಗಳು. ಮಕ್ಕಳು ಉಪಸ್ಥಿತರಿದ್ದರು.
ವೇದಿಕೆಯ ಕಾರ್ಯಕ್ರಮದ ನಂತರ ಮಕ್ಕಳಿಂದ ದೇಶ ಭಕ್ತಿಗೀತೆಗಳ, ಜಾನಪದ ಗೀತೆಗಳ, ನಾಟಕಗಳ ಸುಂದರ ಪ್ರಸ್ತುತಿ ಮೂಡಿಬಂದವವು. ಶಾಲಾ ಶಿಕ್ಷಕ ವರ್ಗದಿಂದ ಕಾರ್ಯಕ್ರಮ ನಿರೂಪಣೆ ಮಾಡಲಾಯಿತು, ವಿಶೇಷವಾಗಿ ಮಾ ಎಂದು ವಿವಿಧ ಭಾಷೆಗಳಲ್ಲಿ ಬರೆದ ಸೆಲ್ಫಿ ಕಾರ್ನರ್ ಎಲ್ಲ ತಂದೆ ತಾಯಿಯರನ್ನು ಆಕರ್ಷಿಸಿತು, ಅಲ್ಲಿ ತಮ್ಮ ಮಕ್ಕಳೊಂದಿಕೆ ತಂದೆ ತಾಯಿಗಳು ಫೆÇೀಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.