ಕಲಬುರಗಿ,ಜು.18-ಹಣ ನೀಡುವಂತೆ ತಂದೆಗೆ ಪೀಡಿಸಿದ ಮಗನೊಬ್ಬ ಹಣ ನೀಡದೇ ಇದ್ದಾಗ ತಂದೆಗೆ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಆಳಂದ ಚೆಕ್‍ಪೋಸ್ಟ್ ಹತ್ತಿರದ ಶಿವಲಿಂಗೇಶ್ವರ ಕಾಲೋನಿಯ ದಿಲೀಪ್ ರಾಠೋಡ್ ಎಂಬುವವರಿಗೆ ಅವರ ಹಿರಿಯ ಮಗ ಸುರೇಶ ರಾಠೋಡ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿದ್ದಾನೆ.
ತರಕಾರಿ ವ್ಯಾಪಾರಿಯಾಗಿರುವ ದಿಲೀಪ್ ರಾಠೋಡ್ ಅವರ ಹಿರಿಯ ಮಗ ಸುರೇಶ ರಾಠೋಡ್ 15 ಸಾವಿರ ರೂಪಾಯಿ ನೀಡುವಂತೆ ಪೀಡಿಸಿದ್ದಾನೆ. ಆಗ ಅವರು ಹಣ ನೀಡಲು ನಿರಾಕರಿಸಿದಾಗ ಕುಪಿತನಾದ ಸುರೇಶ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿದ್ದಾನೆ. ಈ ಸಂಬಂಧ ಸುರೇಶ ರಾಠೋಡ್ ಮತ್ತು ಇದಕ್ಕೆ ಪ್ರಚೋದನೆ ನೀಡಿದ ರವಿ ರಾಠೋಡ್ ವಿರುದ್ಧ ದಿಲೀಪ್ ರಾಠೋಡ್ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.