ತಂತ್ರಜ್ಞಾನವು ಆಧುನಿಕ ಭಾರತದ ಅಭಿವೃದ್ಧಿಗೆ ಪೂರಕವಾಗಿ ಅಭಿವೃದ್ಧಿಗೊಳ್ಳುತ್ತಿದೆ

ಸಂಜೆವಾಣಿ ನ್ಯೂಸ್
ಮೈಸೂರು : ಮೇ.05:- ಮೈಸೂರಿನ ಎಂ.ಎಂ. ಕೆ ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯ ವಿಜ್ಞಾನ ವಿಭಾಗಗಳ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಅಂಗವಾಗಿ ಐಟೆಕ್ನರಿ ರಾಜ್ಯ ಮಟ್ಟದ ಒಂದುದಿನದ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎನ್ ಐ ಇ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕರಾದ ಪೆÇ್ರ ನರಸಿಂಹಕೌಲ್ಗುಡ್ ಅವರು ಉದ್ಘಾಟಿಸಿ ತಂತ್ರಜ್ಞಾನವು ಆಧುನಿಕ ಭಾರತದ ಅಭಿವೃದ್ಧಿಗೆ ಪೂರಕವಾಗಿ ಅಭಿವೃದ್ಧಿಗೊಳ್ಳುತ್ತಿದೆ. ನಾಗರೀಕತೆ ಬೆಳೆದಂತೆ ಮಾನವನ ಆಲೋಚನಾ ಶಕ್ತಿಯು ಹೊಸ ನಾವಿನ್ಯತೆಯನ್ನು ಪಡೆದು ಮಾನವನ ಶಕ್ತಿ ಸಾಮಥ್ರ್ಯವನ್ನು ಉದ್ದೀಪನಾಗೊಳಿಸುತ್ತಿದೆ. ಇಂದಿನ ವಿಜ್ಞಾನ ಯುಗವು ಮೂಲಭೂತ ಕ್ಷೇತ್ರಗಳಾದ ಕೃಷಿ ತೋಟಗಾರಿಕೆಯೂ ಸೇರಿದಂತೆ ಕೈಗಾರಿಕೆ ನೀರಾವರಿ ಖಗೋಳಶಾಸ್ತ್ರ ಭೂಗರ್ಭಶಾಸ್ತ್ರ ದೂರ ಸಂಪರ್ಕ ವೈದ್ಯಕೀಯ, ಕಂಪ್ಯಟರ್ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಕೃತಕ ಬುದ್ಧಿಮತ್ತೆಯು ಇಂದು ವೇಗವಾಗಿ ಬೆಳೆಯುತ್ತಿದೆ ಇದರ ಬಗೆಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ ಸಾಯಿನಾಥ್ ಮಲ್ಲಿಗೆಮಾಡು ಅವರು ಮಾತನಾಡಿ ನಾಗರೀಕತೆ ಬೆಳೆದಂತೆ ಆಧುನಿಕ ಆವಿಷ್ಕಾರಗಳು ತಂತ್ರಜ್ಞಾನದ ಮೂಲಕ ಅಭಿವೃದ್ಧಿಗೊಳ್ಳುತ್ತಿದೆ.ಬೀಸೋಕಲ್ಲು ಒನಕೆ ಕೃಷಿ ಪರಿಗಳ ಬಳಕೆಯಿಂದ ಪ್ರಾರಂಭಗೊಂಡ ತಂತ್ರಜ್ಞಾನವು ಇಂದು ದೇಶದ ಎಲ್ಲಾ ಕ್ಷೇತ್ರಗಳಲ್ಲಿಯೂ ನಿತ್ಯವೂ ಅಭಿವೃದ್ಧಿಗೊಳ್ಳುತ್ತಿದೆ ಇದರಿಂದ ದೇಶದ ಸಮಗ್ರ ಅಭಿವೃದ್ಧಿಗೆ ಅವಕಾಶಸಿಕ್ಕಿದೆ ಕೋವಿಡ್ ವಿಷಮ ಕಾಲದಲ್ಲಿ ಇಡೀ ಜಗತ್ತೇ ಸ್ಥಬ್ಧಗೊಂಡಾಗ ಎಲ್ಲರಿಗೂ ತಂತ್ರಜ್ಞಾನ ಆಧಾರಿತವಾಗಿ ಎಲ್ಲಾ ರೀತಿಯ ಅನುಕೂಲಗಳು ದೊರೆಯಲು ಸಹಕಾರವಾಯಿತು. ತಂತ್ರಜ್ಞಾನದ ಹೊಸ ಹೊಸ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಶೋತ್ತರವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ನಮ್ಮಕಾಲೇಜಿನಲ್ಲಿ ಪ್ರತಿವರ್ಷ ಐಟೆಕ್ನರಿ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ವಿಜ್ಞಾನದ ಸಮಗ್ರ ವಿಕಸನದ ವಿಷಯಗಳನ್ನು ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಪೆÇ್ರ ಎನ್ ಭಾರತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ಕ್ಷೇತ್ರದ ಬಗೆಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು ಮೈಸೂರು ನಗರದ ವಿವಿಧ ಕಾಲೇಜುಗಳಿಂದ 150 ಪದವಿ ,ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ನೆರವು ಪಡೆದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಪೆÇ್ರ ಕೆ ಎಸ್ ಸುಕೃತ, ಮುಖ್ಯಸ್ಥರಾದ
ಪೆÇ್ರ ಚೈತ್ರ, ಪೆÇ್ರ ಪವಿತ್ರ ಅಧ್ಯಾಪಕರಾದ ಪಲ್ಲವಿ ಅಂಗಡಿ, ನಿಹಾರಿಕ ಜೈನ್,ಹೇಮಾ ಚೈತ್ರ ಮಲ್ಲು ಮೊದಲಾದವರು ಉಪಸ್ಥಿತರಿದ್ದರು.