ತಂತ್ರಜ್ಞಾನದ ಯುಗದಿಂದ ನಾಟಕ ಕಲಾವಿದರ ಬದುಕು ದುಸ್ಥರ:ಅಸ್ಕಿ

ತಾಳಿಕೋಟೆ:ಜ.8: ಇಂದಿನ ತಂತ್ರಜ್ಞಾನದ ಯುಗದಲ್ಲಿ ಟಿವಿ ಮಾಧ್ಯಮ ಮತ್ತು ಡಿಜಿಟಲ್ಲಿಕರಣದಿಂದ ನಾಟಕಗಳು ನಶಿಸಿ ಹೋಗುತ್ತಿವೆ ಕಲಾವಿದರ ಬಧುಕು ಕಟ್ಟಿಕೊಳ್ಳುವದೇ ದುಸ್ಥರವೆಂಬಂತಾಗಿದೆ ಇಂತಹ ಕಲಾವಿದರ ಬಧುಕು ಕಟ್ಟಿಕೊಳ್ಳಲು ಮತ್ತೇ ಜನರು ನೈಜತೆಯ ನಾಟಕಗಳನ್ನು ನೋಡಿ ಆಲಿಸುವಂತಾಗಬೇಕೆಂದು ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ನುಡಿದರು.

ಶುಕ್ರವಾರರಂದು ತಾಲೂಕಿನ ಬಳಗಾನೂರ ಗ್ರಾಮದ ಶ್ರೀ ನೀಲಗಂಗಾಂಬಿಕಾದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಶ್ರೀ ನೀಲಗಂಗಾ ನಾಟ್ಯ ಸಂಘ ಬಳಗಾನೂರ ಅವರಿಂದ ಆಯೋಜಿಸಲಾದ ಕವಿ ಮೆಚ್ಚಿದ ಕನ್ಯೆ ಅರ್ಥಾರ್ಥ ಯಾರ ಹಣ್ಣು ಯಾರ ಪಾಲಿಗೆ ಎಂಬ ಸುಂದರ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ರಂಗಭೂಮಿ ಕಲಾವಿದರ ಬಧುಕು ದುಸ್ಥರವಾಗಿದೆ ಬಣ್ಣ ಹಚ್ಚಿಕೊಂಡು ನಟನೆ ಮಾಡುವದು ಸಹಜ ಆದರೆ ಬಧುಕು ನಡೆಸುವದು ಇಂದಿನ ನಿಜ ಜೀವನದಲ್ಲಿ ಕಷ್ಟಕರವಾಗಿದೆ ಎಂದ ಅಸ್ಕಿ ಅವರು ಬಳಗಾನೂರ ಗ್ರಾಮದ ಶ್ರೀ ನೀಲಗಂಗಾಂಬಿಕಾ ದೇವಿ ಜಾತ್ರೋತ್ಸವ ಅಂಗವಾಗಿ ಗ್ರಾಮಸ್ಥರರು ನಾಟಕ ಕಲಾವಿದರನ್ನು ಕರೆಯಿಸಿ ಅವರಿಗೆ ಪ್ರೋತ್ಸಾಹಿಸಿ ಎಲ್ಲ ಜನರಿಗೆ ಸಮಾಜದಲ್ಲಿ ಬಧುಕು ದಾರಿಯನ್ನು ಕಥೆಯ ರೂಪದಲ್ಲಿ ತೋರಿಸುತ್ತಿರುವದು ಶ್ಲಾಘನೀಯವಾಗಿದೆ ಬಳಗಾನೂರಿನ ಶ್ರೀ ನೀಲಗಂಗಾಂಬಿಕಾ ದೇವಿ ಜಾತ್ರೆ ಈ ಭಾಗದಲ್ಲಿ ಪ್ರಸಿದ್ದತೆಯನ್ನು ಪಡೆದುಕೊಂಡಿದೆ ಈ ಜಾತ್ರೋತ್ಸವದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಹಾಗೂ ಅನ್ಯ ರಾಜ್ಯಗಳಿಂದ ಜನರು ಆಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿರುವದು ಇದೊಂದು ಪುಣ್ಯದ ನೆಲವೆಂಬುದು ಕಾಣುತ್ತಿದೆ ಅಣ್ಣ ಬಸವಣ್ಣನವರು ಶ್ರೀ ನೀಲಗಂಗಾಂಬಿಕೆ ದೇವಿ ತಿರುಗಾಡಿದ ನೆಲ ಪುಣ್ಯ ಕ್ಷೇತ್ರವಾಗಿ ಪರಿಣಮಿಸಲಿದೆ ಎಂದ ಅಸ್ಕಿ ಅವರು ಜಾತ್ರೆ ಉತ್ಸವಗಳಲ್ಲಿ ಇಂತಹ ಸಮಾಜಿಕ ನಾಟಕಗಗಳು ಜನರಲ್ಲಿ ಅಡಗಿರುವ ಜಿಡತ್ವವನ್ನು ತೊಳೆದುಹಾಕಿ ಭಕ್ತಿಯ ಪರಾಕಷ್ಠೆಯನ್ನು ಹೆಚ್ಚಲಿಸಿದೆ ಬಳಗಾನೂರ ಗ್ರಾಮವು ಯಾವಾಗಲೂ ಇಲ್ಲಿಯ ಮುಖಂಡರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಶಸ್ವಿಯನ್ನು ಕಾಣುತ್ತಾ ಸಾಗಿದೆ ಇಲ್ಲಿಯ ಜನರ ಸಹಕಾರ ಮತ್ತು ಭಕ್ತಿ ಮೆಚ್ಚುವಂತಹದ್ದಾಗಿದೆ ಎಂದರು.

ಬಿಜೆಪಿ ಮುಖಂಡ ಶಿವಶಂಕರಗೌಡ ಹಿರೇಗೌಡರ, ಡಿ.ಕೆ.ಪಾಟೀಲ, ವೀರೇಶಗೌಡ ಪಾಟೀಲ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ ಅವರು ಮಾತನಾಡಿದರು. ಇಂದಿನ ಟಿವಿ ಮಾಧ್ಯಮ, ಮೋಬೈಲ್ ಬಳಕೆಯಿಂದ ರಂಗಭೂಮಿ ಕಲಾವಿದರ ಜೀವನ ಕಷ್ಟಕರವಾಗಿದೆ ಅಂತಹ ಕಲಾವಿದರಿಗೆ ಪ್ರೋತ್ಸಾಹಿಸುವದರೊಂದಿಗೆ ಬೆಂಬಲಿಸುವಂತಹ ಕಾರ್ಯ ಎಲ್ಲರೂ ಮಾಡಬೇಕೆಂದರು.

ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ವೇ.ಕಂಠಯ್ಯಮಠ ಅವರು ವಹಿಸಿದ್ದರು.

ಅಧ್ಯಕ್ಷತೆಯನ್ನು ಗಣ್ಯರಾದ ನಿಂಗನಗೌಡ ಪಾಟೀಲ ಅವರು ವಹಿಸಿದ್ದರು,
   ವೇದಿಕೆಯ ಮೇಲೆ ಅತಿಥಿಗಳಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲನಗೌಡ ಯಾತಗಿರಿ, ಮುಖಂಡರಾದ ಕಾಶಿಮಪಟೇಲ ಪಾಟೀಲ, ಚನ್ನಣ್ಣ ಅಲದಿ, ಮಲ್ಲಣ್ಣ ದೋರನಹಳ್ಳಿ, ಚಂದ್ರಕಾಂತ ಗೋಗಿ, ಸಂಗನಗೌಡ ಬಿರಾದಾರ, ಪ್ರಭುಗೌಡ ಪಾಟೀಲ, ಬಾಬುಗೌಡ ಬಿರಾದಾರ, ಚಂದ್ರಶೇಖರ ಮುಂಡಾಸ, ರಾಮನಗೌಡ ದೋರನಹಳ್ಳಿ, ಶಿವಣ್ಣ ಕಡಕೋಳ, ಮಲ್ಲನಗೌಡ ಬಿರಾದಾರ, ಪೃಥ್ವಿಗೌಡ ಪಾಟೀಲ, ಪ್ರಭು ಸಜ್ಜನ, ಸಿದ್ದಣ್ಣ ವಾಲಿ, ಮಲ್ಲಣ್ಣ ಬಿರಾದಾರ, ಶ್ರೀಶೈಲ ಭಂಟನೂರ, ಶಿವಣ್ಣ ಕಡಕೋಳ, ಗ್ರಾಂಪಂ ಸದಸ್ಯರಾದ ವೀರೇಶಗೌಡ ಅಸ್ಕಿ, ರಾಮನಗೌಡ ಹೊಸಮನಿ, ಅರುಣ ಪಾಟೀಲ, ಶರಣಗೌಡ ಹಡಲಗೇರಿ, ಮೊದಲಾದವರು ಇದ್ದರು.