ತಂತ್ರಜ್ಞಾನಗಳ ಹಿಂದೆ ಹೋಗಿ ಬದುಕು ನರಕ ಮಾಡಿಕೊಳ್ಳುತ್ತಿದ್ದೇವೆ; ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ, ನ.7;  ನಮ್ಮ ಹಿರಿಯರು ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳಿಗೆ ಹೆಚ್ಚು ಮಹತ್ವಕೊಟ್ಟಿದ್ದರು. ಆದರೆ ನಾವಿಂದು ಮೂಢನಂಬಿಕೆ, ತಂತ್ರಜ್ಞಾನಗಳ ಹಿಂದೆ ಹೋಗಿ ಬದುಕನ್ನು ನರಕ ಮಾಡಿಕೊಳ್ಳುತ್ತಿದ್ದೇವೆ.

ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.ಇಲ್ಲಿನ ಶಿವಕುಮಾರ ಬಯಲು ರಂಗಮAದಿರದಲ್ಲಿ ಆಯೋಜಿಸಿದ್ದ ರಾಷ್ಟಿçÃಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ  ಯಾವ ಮನೆಯಲ್ಲಿ ತಾಯಿ ಸುಸಂಸ್ಕೃತವAತಳಾಗಿರುವಳೊ ಆ ಮನೆ ಅಭಿವೃದ್ಧಿ ಪಥದತ್ತ ಸಾಗುವುದು. ಜಾನಪದ ಸಾಹಿತ್ಯವನ್ನು ಕೇಳಿಸಿಕೊಂಡ ವಿದ್ಯಾವಂತರು ಅವುಗಳನ್ನು ದಾಖಲಿಸಿ ಪದವಿ ಪಡೆದುಕೊಳ್ಳುವುದೇ ವಿದ್ಯಾವಂತರ ಕೆಲಸವಾಗಿದೆ. ಕೇವಲ ಓದು, ಬರಹ, ಬಲ್ಲವರು ಬರೆದದ್ದು ಮಾತ್ರ ಸಾಹಿತ್ಯವಲ್ಲ. ಅನುಭಾವದ ನುಡಿಗಳನ್ನು ಹಂಚಿಕೊಳ್ಳುವವರೆಲ್ಲರೂ ಸಾಹಿತಿಗಳೇ. ನಮ್ಮ ನಾಡಿನ ಜನ ಕುಳಿತು ಓದದೇ ಕಾವ್ಯಗಳನ್ನು ಸೃಷ್ಟಿಸುವ ಕಲೆಯನ್ನು ಕರಗತ ಮಾಡಿಕೊಂಡವರು ಎನ್ನುವುದನ್ನು ನಾವು ಯಾರೂ ಮರೆಯಬಾರದು. ರಾಮಾಯಣ ಮಹಾಕಾವ್ಯ ಬರೆದ ವಾಲ್ಮೀಕಿ ಮೊದಲು ಸಾಮಾನ್ಯನೇ ಆಗಿದ್ದ ಎನ್ನುವುದನ್ನು ಗಮನಿಸಬೇಕು. ಸಮಾಜಕ್ಕೆ ಯಾವುದು ಬೇಕೋ ಅದನ್ನು ತಿಳಿದು ಕೊಡುವವರು ನಿಜವಾದ ಮುಖಂಡ ಎಂದು ಶಿವಕುಮಾರ ಶ್ರೀಗಳು ಹೇಳುತ್ತಿದ್ದರು. ಅವರು ಆಲೋಚಿಸುತ್ತಿದ್ದುದನ್ನು ತಕ್ಷಣ ಕಾರ್ಯಗತಗೊಳಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಿರಿಗೆರೆ ಅಲ್ಪ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಯಿತು. ತಾಯಿ ಹೃದಯದ ಪುರುಷರೂ ತಾಯಂದಿರೇ. ಇದಕ್ಕೆ ಶ್ರೀ ಶಿವಕುಮಾರ ಶ್ರೀಗಳೇ ಸಾಕ್ಷಿ. ಸಾರ್ವಜನಿಕರ ಹಿತಕ್ಕಾಗಿ ತನ್ನನ್ನು ತಾನು ಗಂಧದAತೆ ತೇಯ್ದು ಕೊಳ್ಳುವವರೆಲ್ಲೂ ತಾಯಂದಿರೇ. ಜನಪದ ಕವಿ, ಸಾಹಿತಿಗಳು ಎಲ್ಲಿಯೂ ತಮ್ಮ ಹೆಸರನ್ನು ಹಾಕಿಕೊಳ್ಳಲಿಲ್ಲ. ಶರಣರು ತಮ್ಮ ಅನುಭವ ಮಂಟಪದಲ್ಲಿ ಚರ್ಚಿಸುದುದನ್ನೇ ವಚನವಾಗಿಸಿದರು. ಮನಸ್ಸು ಹತೋಟಿಯಲ್ಲಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು. ಕೋಟಾ ಶ್ರೀನಿವಾಸ್ ಪೂಜಾರ್ ಅವರು ಕೆಲವೇ ಕೆಲವು ಆದರ್ಶ ಸಚಿವರಲ್ಲಿ ಒಬ್ಬರು. ಅವರ ಸರಳತೆ, ಪ್ರಾಮಾಣಿಕತೆ, ಬದ್ಧತೆ ಎಲ್ಲರಿಗೂ ಮಾದರಿಯಾದುದು. ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರ ಮಾತೃಭಾಷೆ ಗುಜರಾತಿ. ಆದರೂ ಕನ್ನಡವನ್ನು ಇಷ್ಟು ಸುಲಲಿತವಾಗಿ, ಸ್ಪುಟವಾಗಿ, ತಪ್ಪಿಲ್ಲದಂತೆ ತಮ್ಮ ವಿಚಾರಗಳು ಎಲ್ಲರಿಗೂ ಮನಮುಟ್ಟುವಂತೆ ಹೇಳಿದುದು ನಮಗೆ ಸೋಜಿಗವನ್ನುಂಟು ಮಾಡಿದೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ ತಾಯಿಯೇ ಸಾಕ್ಷಿ. ಈ ಹಿನ್ನೆಲೆಯಲ್ಲಿಯೇ ಸಿದ್ಧರಾಮೇಶ್ವರರು `ಹೆಣ್ಣು ಹೆಣ್ಣಲ್ಲ, ಸಾಕ್ಷಾತ್ ಕಪಿಲಸಿದ್ಧಮರ್ಲಿಕಾರ್ಜುನ’ ಎಂದರಲ್ಲದೆ; ಆಕೆ ಸಮಾಜದ ಜ್ಯೋತಿ, ಕಣ್ಣು, ನಾಡಿನ ಬೆಳಕು ಎಂದು ಗೌರವಿಸಿದರು. ಒಳಗೆ ಸುಳಿವ ಆತ್ಮ ಹೆಣ್ಣೂ ಅಲ್ಲ; ಗಂಡೂ ಅಲ್ಲ ಎನ್ನುವುದನ್ನು ದಾಸಿಮಯ್ಯನವರು ಹೇಳಿದರು. ದಿವ್ಯ ಪ್ರಭು ಅವರ ಮಾತುಗಳಿಂದ ಜಿಲ್ಲಾಧಿಕಾರಿಗಳಾಗಿ ಉತ್ತಮ ಆಡಳಿತ ನೀಡುವರೆಂಬ ಆತ್ಮವಿಶ್ವಾಸ ನಮ್ಮದು. ಕನ್ನಡದ ಅಧಿಕಾರಿಗಳಿಗೇ ಕನ್ನಡವನ್ನು ಸರಿಯಾಗಿ ಓದಲು ಬರುವುದಿಲ್ಲ. ನಮಗೆ ಬಾಷೆ, ನೆಲ, ಜಲವನ್ನು ಉಳಿಸಿಕೊಳ್ಳಲು ಇಂಥ ತಾಯಂದಿರ ಅವಶ್ಯಕತೆ ಇದೆ. ಕೆಟ್ಟವರನ್ನೂ ಸರಿದಾರಿಗೆ ತರಬಹುದು ಎನ್ನುವ ಆತ್ಮವಿಶ್ವಾಸ ನಮ್ಮದು. ಬುದ್ಧಿವಂತರನ್ನು ಬುದ್ಧಿವಂತರನ್ನಾಗಿ ಮಾಡುವುದು ದೊಡ್ಡದಲ್ಲ; ದಡ್ಡರನ್ನು ಬುದ್ಧಿವಂತರನ್ನಾಗಿ ಮಾಡುವುದು ದೊಡ್ಡದು ಎಂದರು. ಶಾಲಾ ವಿದ್ಯಾರ್ಥಿಗಳಾದÀ ಪಲ್ಲವಿ, ಸಿಂಚನಾ ಮತ್ತು ತೋರಣ ಕಾರ್ಯಕ್ರಮ ನಡೆಸಿಕೊಟ್ಟರು.

Attachments area