ತಂಜಿಮ್ ಸಮಿತಿ ಸದಸ್ಯರಿಂದ ಜೆಡಿಎಸ್‌ ಪಕ್ಷಕ್ಕೆ   ಬೆಂಬಲ

ದಾವಣಗೆರೆ. ಏ.೨೬; ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣಾ  ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಜೆ.ಅಮಾನುಲ್ಲಾ ಖಾನ್ ಅವರಿಗೆ ಮುಸ್ಲಿಂ ಸಮಾಜದ ತಂಜಿಮ್ ಸಮಿತಿ ಬೆಂಬಲ ನೀಡಿದೆ ಎಂದು ಸಮಿತಿ  ಸದಸ್ಯರಾದ ಶಾನವಾಜ್ ಖಾನ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುದಕ್ಷಿಣ ಕ್ಷೇತ್ರದ ಸುಮಾರು 83,000 ಸಾವಿರ ಮುಸ್ಲಿಂ ಮತದಾರರು ಇರುವುದರಿಂದ ನಮ್ಮ ಸಮುದಾಯದವರನ್ನು ಗೆಲ್ಲಿಸಬೇಕಾಗಿದೆ. ಮುಸ್ಲಿಂ ಮತದಾರ ಈವರೆಗೂ ಆಯ್ಕೆ ಮಾಡುತ್ತಾ ಬಂದಿರುವ ಶಾಸಕರಿಂದ ಸಮಾಜಕ್ಕೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಅಭಿವೃದ್ಧಿ ಆಗಿರುವುದಿಲ್ಲಾ ಆದರೂ ಸಹ ಕೇವಲ ಆಸೆ ಆಮೀಷಗಳಿಗೆ ಮತ್ತು ಸುಳ್ಳು ಆಶ್ವಾಸನನೆಗೆ ಮಣೆಹಾಕಿ ಕೆಲವರು ಅವರಿಗೆ ಬೆಂಬಲ ನೀಡುತ್ತಿದ್ದು ಅದು ಅವರವರ ವೈಯಕ್ತಿಕ ನಿರ್ಧಾರವೇ ವಿನಃ ಸರ್ವ ಮುಸ್ಲಿಂ ಸಮಾಜದ ತೀರ್ಮಾನ ಆಗಿರುವುದಿಲ್ಲ.ದಕ್ಷಿಣ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದು ಅವುಗಳ ಪರಿಹಾರ ಮಾಡುತ್ತಾ ಬಂದಿರುವ ಜೆ. ಅಮಾನುಲ್ಲಾ ಖಾನ್ ರನ್ನು  ಗೆಲ್ಲಿಸಬೇಕಿದೆ ಎಂದರು.ಕೆಲವರು ಚುನಾವಣಾ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೇಸ್ ಗೆ ಮತ ನೀಡಿ ಎಂದು ಪ್ರಚಾರ ಮಾಡುತ್ತಾರೆ. 2018 ರ ಚುನಾವಣೆಯಲ್ಲಿ ಮುಸ್ಲಿಂ ಮತಗಳ ಪಡೆದು ಗೆದ್ದಂತಹ ಕಾಂಗ್ರೆಸ್ ಶಾಸಕರು ಯಾವ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು.ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜೆ.ಅಮಾನುಲ್ಲಾ ಖಾನ್ ಮಾತನಾಡಿ ಕಾಂಗ್ರೆಸ್ ಗೆ ಸೋಲಿನ ಭಯ ಉಂಟಾಗಿದೆ.ಕಾಂಗ್ರೆಸ್ ನಲ್ಲಿ ದುರ್ಬಲ ಕಾರ್ಯಕರ್ತರು ಇದ್ದಾರೆ ಆದ್ದರಿಂದ ಬೇರೆ ಪಕ್ಷದವರನ್ನು ಸೆಳೆಯುವ ಕಾರ್ಯದಲ್ಲಿ ತೊಡಗಿದ್ದಾರೆ.ನಮ್ಮ ಪಕ್ಷದ ಯುವ ಮುಖಂಡ ಮನ್ಸೂರ್ ಅಲಿ ಸ್ವಯಂಪ್ರೇರಿತವಾಗಿ ಕಾಂಗ್ರೆಸ್ ಗೆ ಹೋಗಿಲ್ಲ ಅವರನ್ನು ಬೆದರಿಕೆ ಹಾಕಿ ಕಾಂಗ್ರೆಸ್ ನವರು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ‌ ಅವರು ನಮ್ಮ ಬಳಿ ರಕ್ಷಣೆ ಕೋರಿ ಬಂದಿದ್ದರೆ ಖಂಡಿತವಾಗಿ ನಾವು ಅವರಿಗೆ ರಕ್ಷಣೆ ನೀಡುತ್ತಿದ್ದವು ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್.ಷಫೀವುಲ್ಲಾ,ಟೈಲ್ಸ್ ಜಬೀವುಲ್ಲಾ,ಟಿ.ಅಸ್ಗರ್,ಜಮೀರ್ ಅಹ್ಮದ್ ಖಾನ್,ತಹಸೀನ್ ಬೇಗ್ ಉಪಸ್ಥಿತರಿದ್ದರು.