ತಂಗಮ್ಮ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ. 12; ನಗರದ ಬಿಐಟಿಎಂ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮರೇಶಯ್ಯ ಹಿರೇಮಠ ಅವರ ತಾಯಿ ತಂಗಮ್ಮ ಸೋಮಯ್ಯ ಸ್ವಾಮಿ ಪಟ್ಟಿಕಂತಿ ಹಿರೇಮಠ (80)  ನಿನ್ನೆ ರಾತ್ರಿ 9.30 ಕ್ಕೆ ದೈವಾಧೀನರಾಗಿದ್ದಾರೆ.
ಪತಿ ಸೋಮಯ್ಯ ಸ್ವಾಮಿ ಪಟ್ಟಿಕಂತಿ ಹಿರೇಮಠ, ನಾಲ್ವರು ಪುತ್ರರು, ಸೊಸೆಯಂದಿರರು, ಓರ್ವ ಪುತ್ರಿ, ಅಳಿಯ‌ ಹಾಗೂ ಮೊಮ್ಮಕ್ಕಳು, ಅಪಾರ ಸಂಖ್ಯೆಯ ಭಕ್ತರು , ಬಂಧು ವರ್ಗ ವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಅವರ ಸ್ವಗ್ರಾಮ ರಾಯಚೂರು ಜಿಲ್ಲೆಯ ‌ಲಿಂಗಸೂಗೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮದ ಹೊಲದಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಇಂದು ಮಧ್ಯಾಹ್ನ  ನೆರವೇರಿತು.
 ಸಂತಾಪ
ಮೃತರ ಆತ್ಮಕ್ಕೆ ಶಾಂತಿಕೋರಿ ಬಿಐಟಿಎಂ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥ ಡಾ. ಯಶವಂತ ಭೂಪಾಲ್, ಡಾ. ವೆಂಕಟ್ ಮಹಿಪಾಲ್,‌‌ಅಶೋಕ್ ಭೂಪಾಲ್,‌ ಲಿಂಗರಾಜ ಭೂಪಾಲ್ ಹಾಗೂ ಸಿಬ್ಬಂದಿಯು ಸಂತಾಪ ವ್ಯಕ್ತಪಡಿಸಿದ್ದಾರೆ.