ಢೋಹರ ಕಕ್ಕಯ್ಯ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ಅನ್ಯಾಯ ಖಂಡಿಸಿ ಮನವಿ

ಕಲಬುರಗಿ:ಎ.13:ಬಹುಸಂಖ್ಯಾತ ಅಸ್ಪೃಶ್ಯ ಸಮುದಾಯವಾದಂತಹ ಡೋಹರ್ ಕಕ್ಕಯ್ಯ ಸಮುದಾಯವನ್ನು ಒಳ ಮೀಸಲಾತಿ ವರ್ಗೀಕರಣದಲ್ಲಿ ತಪ್ಪಾಗಿ 4ನೇ ಗುಂಪಿನಲ್ಲಿ ಸೇರಿಸಿದ್ದನ್ನು ಖಂಡಿಸಿ 2023 ರ ವಿಧಾನಸಭಾ ಚುನಾವಣಾ ಮತದಾನ ಬಹಿಷ್ಕರಿಸುತೆವೆ ಎಂದು ಶರಣ ಢೋಹರ ಕಕ್ಕಯ್ಯ ದೇವಸ್ಥಾನ ಟ್ರ್‍ಸ್ಟ್ ಪದಾಧಿಕಾರಿಗಳು ಅಪ್ಪಾರ ಜಿಲ್ಲಾಧಿಗಳಿಗೆ ಬುದುವಾರ ಮನವಿ ಸಲ್ಲಿಸಿದರು.

ಒಳ ಮೀಸಲಾತಿ ವರ್ಗೀಕರಣದಲ್ಲಿ ವರದಿಯನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಾಗ ದಂತ ಎಡಗೈ ಸಮುದಾಯ, ಬಹುಸಂಖ್ಯಾತ ಅಸ್ಪೃಶ್ಯ ಹಾಗೂ ಆರ್ಥಿಕವಾಗಿ ಹಿಂದುಳದ ಸಮುದಾಯವಾದಂತಹ ಡೋಹರ್ ಕಕ್ಕಯ್ಯ ಸಮುದಾಯವನ್ನು ಅವೈಜ್ಞಾನಿಕವಾಗಿ 4ನೇ ಗುಂಪಿನಲ್ಲಿ ಇರಿಸಲಾಗಿದೆ. ಇದು ನಮ್ಮ ಸಮುದಾಯಕ್ಕಾದ ದೊಡ್ಡ ಅನ್ಯಾಯವಾಗಿರುತ್ತದೆ. ನಮ್ಮ ಸಮುದಾಯವು ಚರ್ಮಗಾರಿಕೆಯನ್ನ (ಚರ್ಮ ಹದ ಮಾಡುವುದು) ಮೂಲ ಕುಲ ಕಸುಬಾಗಿಸಿಕೊಂಡಿದ್ದು ಶತಮಾನಗಳಿಂದ ಅಸ್ಪೃಶ್ಯವಾಗಿಯೇ ಉಳಿದುಕೊಂಡಿದೆ. ಕರ್ನಾಟಕದಾದ್ಯಂತ ಸುಮಾರು 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಇರುತ್ತದೆ. ದಲಿತ ಎಡಗೈ ಸಮುದಾಯಗಳಾದ ಚರ್ಮ ಸಂಬಂಧಿತ ಕಸುಬು ಮಾಡುವ ಮಾದಿಗ ಹಾಗೂ ಸಮಗಾರ (ಚರ್ಮದ ಚಪ್ಪಲಿ ಮಾಡುವ ಕಾಯಕ) ಜಾತಿಗಳೊಂದಿಗೆ ನಮ್ಮ ಜಾತಿಯೂ ಇದ್ದು ಮೂರು ಜಾತಿಗಳು ಸಹೋದರ ಸಂಬಂಧಿತ ಜಾತಿಗಳಾಗಿರುತ್ತವೆ.

ಇಲ್ಲಿಯವರೆಗೂ ನಮ್ಮ ಸಮಾಜ ಆದಿಜಾಂಭವ ಅಭಿವೃದ್ಧಿ ನಿಗಮದ ಹಾಗೂ ಅಡ್ಡ ಅಡಿಯಲ್ಲಿ ಸೌಲಭ್ಯಗಳನ್ನ ಪಡೆಯುತ್ತಿದ್ದರೂ ಒಳ ಮೀಸಲಾತಿ ವರ್ಗೀಕರಣದ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸುವಾಗ ದಂತ ಎಡಗೈ ಸಮುದಾಯದ ಮಾದಿಗ ಹಾಗೂ ಸಮಗಾರ ಸಮುದಾಯಗಳನ್ನು ಮಾತ್ರ 1ನೇ ಗುಂಪಿನಲ್ಲಿ ಹೆಸರಿಸಿ 6% ಮೀಸಲಾತಿ ನೀಡಿದ್ದು ನಮ್ಮ ಡೋಹರ ಸಮುದಾಯವನ್ನು ಅಲೆಮಾರಿ ಜನಾಂಗವೆಂದು ತಪ್ಪಾಗಿ ತಿಳಿದು 4ನೇ ಗುಂಪಿನ 89 ಜಾತಿಗಳೊಂದಿಗೆ ಸೇರಿಸಿ ಕೇವಲ 1% ಮೀಸಲಾತಿ ನಿಗದಿಪಡಿಸಿದ್ದುಉ ಅತ್ಯಂತ ಅನ್ಯಾಯವಾಗಿರುತ್ತದೆ.

ಕಾರಣ ಮಾನ್ಯರು ಇನ್ನೊಮ್ಮೆ ನಮ್ಮ ಸಮುದಾಯದ ಸ್ಥಿತಿಗತಿಗಳನ್ನು ಪರಿಶಿಅಸಿ, ಅವಲೋಕಿಸಿಕೊಂಡು ನಮ್ಮ ಸಮುದಾಯವನ್ನು 1ನೇ ಗುಂಪಿನಲ್ಲಿರಿಸಿ ನಮ್ಮ ಸಮುದಾಯಕ್ಕೆ 6% ಮೀಸಲಾತಿಯಲ್ಲಿ ಅವಕಾಶ ಒದಗಿಸಿ ಕೊಡಬೇಕೆಂದು ಕೇಳಕೊಂಡು ಈ ಅನ್ಯಾಯವನ್ನು ಖಂಡಿಸಿ ನಾವು ಮುಂಬರುವ 2023 ರ ವಿಧಾನಸಭಾ ಚುನಾವಣಾ ಮತದಾನ ಬಹಿಷ್ಕರಿಸುತ್ತೇವೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಟ್ರ್‍ಸ್ಟ್‍ನ ಅಧ್ಯಕ್ಷ ಸಾಯಬಣ್ಣ ಎಂ. ಹೋಳ್ಳಕರ್, ಉಪಾಧ್ಯಕ್ಷ ಅಂಗೋಜಿ ಗಾಜರೆ, ಪ್ರ.ಕಾರ್ಯದರ್ಶಿ ಮೋತಿಲಾಲ ಕಟಕ, ಜಂಟಿ ಕಾರ್ಯದರ್ಶಿ ಅಶೋಕ ಶಿಂಧೆ, ರಮೇಶ ಗಾಯದನಕರ ಇದ್ದರು.