ಢಾಗಾ ಪರಿವಾರ:ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರದ ಕೊಡುಗೆ

ಲಿಂಗಸುಗೂರು.ಮೇ.೪-ಪಟ್ಟಣದ ಜೈನ್ ಸಮುದಾಯದ ಖ್ಯಾತ ಚಿನ್ನಾಭರಣ ವ್ಯಾಪಾರಿಗಳಾದ ಗೌತಮ ಚಂದ ಕುಮಾರ ಢಾಗಾ, ಅಕ್ಷಯ ಚಂದ್ ಕುಮಾರ ಢಾಗಾ, ಗಣೇಶ ಸೇಠ್, ಶೀತಲ್ ಢಾಗಾ ಪರಿವಾರದವರು ಸರ್ಕಾರಿ ಆಸ್ಪತ್ರೆಗೆ ನೂತನ ಡಯಾಲಿಸಿಸ್‌ನ ಕೊಡುಗೆಯಾಗಿ ನೀಡಿದರು.
ಸ್ಥಳೀಯ ೧೦೦ ಹಾಸಿಗೆ ಸಾಮರ್ಥ್ಯದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಲಿಂಗಸುಗೂರು ತಾಲೂಕು ಸೇರಿದಂತೆ ಪಕ್ಕದ ಸುರಪುರ, ಮಸ್ಕಿ, ಸಿಂಧನೂರು, ಮುದ್ದೇಬಿಹಾಳ, ಹುಣಸಗಿ, ದೇವದುರ್ಗ ಸೇರಿದಂತೆ ವೈದ್ಯಕೀಯ ಸೇವೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಇದ್ದುದರಲ್ಲೆ ಉತ್ತಮ ಸೇವೆ ನೀಡುತ್ತಾರೆ. ಪರಿಣಾಮ ಸರ್ಕಾರಿ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪರಿಣಾಮ ಈಗಾಗಲೆ ಜಿಲ್ಲೆಯಲ್ಲಿಯೇ ಸಿಟಿ ಸ್ಕ್ಯಾನ್ ಯಂತ್ರ ಹೊಂದಿದ ಏಕೈಕ ಆಸ್ಪತ್ರೆ ಎಂಬ ಪ್ರತೀತಿ ಹೊಂದಿತ್ತು.
ಇಂತಹ ಹೆಗ್ಗಳಿಕೆಯ ಸರ್ಕಾರಿ ಆಸ್ಪತ್ರೆಗೆ ಪಟ್ಟಣದ ಜೈನ್ ಸಮುದಾಯದ ಢಾಗಾ ಕುಟುಂಬದವರು ೬ ಲಕ್ಷ ರೂಪಾಯಿ ವೆಚ್ಚದ ನೂತನ ಡಯಾಲಿಸಿಸ್ ಯಂತ್ರವನ್ನು ಖರೀದಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು. ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುತ್ತಾರೆ. ಇದರಿಂದ ಡಯಾಲಿಸಿಸ್ ಯಂತ್ರದಾನ ಮಾಡಿರುವುದು. ಬಡ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಡಯಾಲಿಸಿಸ್ ಯಂತ್ರವನ್ನು ಢಾಗಾ ಪರಿವಾರದವರು ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಹಾಗೂ ಡಯಾಲಿಸಿಸ್ ತಜ್ಞ ವೈದ್ಯ ಶ್ರೀಕಾಂತರವರಿಗೆ ಹಸ್ತಾಂತರಿಸಿದರು.
ಸರ್ಕಾರಿ ಆಸ್ಪತ್ರೆಗೆ ೬ ಲಕ್ಷ ರೂಪಾಯಿ ಡಯಾಲಿಸಿಸ್ ಯಂತ್ರವನ್ನು ದಾನ ಮಾಡಿದ ಲಿಂಗಸುಗೂರು ಢಾಗಾ ಪರಿವಾರಕ್ಕೆ ಪಟ್ಟಣದ ಹಾಗೂ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.