ಡ್ರೋನ್ ಬಳಕೆ ಪಾಕ್‌ಗೆ; ಭಾರತ ಎಚ್ಚರಿಕೆ

ನವದೆಹಲಿ,ನ.೨೫- ಅಂತರಾಷ್ಟ್ರೀಯ ಗಡಿಭಾಗದಲ್ಲಿ ಡ್ರೋನ್ ಬಳಕೆ ಮಾಡಿರುವ ಪಾಕಿಸ್ತಾನದ ಕ್ರಮಕ್ಕೆ ಭಾರತ ಭಾರಿ ಪ್ರತಿರೋಧ ವ್ಯಕ್ತಪಡಿಸಿದೆ.
ಭಾರತ ಮತ್ತು ಪಾಕಿಸ್ತಾನದ ಕಮಾಂಡರ್ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ಭಾರತೀಯ ಗಡಿ ಭದ್ರತಾ ಪಡೆ, ಪಾಕಿಸ್ತಾನದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಡ್ರೋನ್ ಬಳಕೆ ಮಾಡುವುದು ಮತ್ತು ಒಳನುಸುಳುವ ಕ್ರಮ ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಡ್ಡಿಮುರಿದಂತೆ ಎಚ್ಚರಿಕೆ ನೀಡಿದೆ.
ಅಂತರಾಷ್ಟ್ರೀಯ ಗಡಿಭಾಗದಲ್ಲಿ ಡ್ರೋನ್ ಬಳಕೆ ಮಾಡುವುದು ಮತ್ತು ಒಳನುಸುಳುವಿಕೆ ಪ್ರಯತ್ನ ಮಾಡಿದರೆ ಭಾರತ ಅದಕ್ಕೆ ತಕ್ಕ ಪ್ರತಿರೋಧ ಮತ್ತು ತಿರುಗೇಟು ನೀಡಬೇಕಾಗುತ್ತದೆ ತಮ್ಮ ಗಮನದಲ್ಲಿರಲಿ ಎಂದು ಪಾಕಿಸ್ತಾನ ಸೇನೆಗೆ ನೇರವಾಗಿ ಸಂದೇಶ ರವಾನೆ ಮಾಡಿದೆ.
ಜಮ್ಮು-ಕಾಶ್ಮೀರದ ಜಮ್ಮು ಬಳಿಯ ಆರ್ ಎಸ್ ಪುರ ಬಳಿ ನಡೆದ ಉಭಯ ದೇಶಗಳ ಸೇನಾಧಿಕಾರಿಗಳ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಭಾರತದ ಗಡಿ ಭದ್ರತಾ ಪಡೆ ತನ್ನ ಪ್ರತಿರೊಧ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಡಿಭದ್ರತಾ ಪಡೆಯ ವಕ್ತಾರ ಮತ್ತು ಕಮಾಂಡೆಂಟ್ ಅಜಯ್ ಸೂರ್ಯವಂಶಿ, ಉಭಯ ದೇಶಗಳ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಪಾಕಿಸ್ತಾನದ ನರಿಬುದ್ಧಿ ಮತ್ತು ಕುತಂತ್ರಗಳ ಬಗ್ಗೆ ನೇರವಾಗಿ ವಿಷಯ ಪ್ರಸ್ತಾಪ ಮಾಡಿ ಈ ರೀತಿಯ ಬೆಳವಣಿಗೆ ಒಳ್ಳೆಯದಲ್ಲ ಎಂದು ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಸೇನೆ ಗೊತ್ತಿದ್ದೂ ಕೂಡಾ ಈ ರೀತಿಯ ಕಾರ್ಯಾಚರಣೆ ನಡೆಸಿದ್ದರೆ ಅದಕ್ಕೆ ಭಾರತವೂ ಕೂಡ ಮುಂದಿನ ದಿನಗಳಲ್ಲಿ ತಕ್ಕ ತಿರುಗೇಟು ನೀಡಲಿದೆ ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಕಿವಿಮಾತು ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ಗಡಿಭಾಗದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉಭಯ ದೇಶಗಳ ಮಾತುಕತೆಯಲ್ಲಿ ಸಹಮತಕ್ಕೆ ಬರಲಾಗಿದೆ ಜೊತೆಗೆ ಗಡಿಯಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡಲು ಕೂಡ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ ೨ರಂದು ಪಾಕಿಸ್ತಾನ ಸೇನಾಪಡೆ ಡ್ರೋನ್ ಮೂಲಕ ಎಕೆ ೪೭ ರೈಫಲ್, ೩ ಮ್ಯಾಕ್ಸಿನ್, ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಿದ್ದು ಇದು ಭಾರತದ ಸೇನಾಪಡೆಯ ಕೆಂಗಣ್ಣಿಗೆ ಗುರಿಯಾಗಿದೆ.
ಗಡಿಭಾಗದಲ್ಲಿ ಪಾಕಿಸ್ತಾನ ಪದೇ ಪದೇ ನಾನು ಮಾಡಿಕೊಂಡಿರುವ ನಿಯಮಗಳನ್ನು ಉಲ್ಲಂಘಿಸುತ್ತಿರುವ ವಿಷಯದ ಕುರಿತು ಕೂಡ ಕಬಡ್ಡಿ ಮಟ್ಟದ ಮಾತುಕತೆಯಲ್ಲಿ ಪ್ರಸ್ತಾಪ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.