ಡ್ರೈ ಫ್ರೂಟ್ಸ್ ಮೋದಕ

ಕಣಕ ಮಾಡುವ ವಿಧಾನ:
ಅರ್ಧ ಬಟ್ಟಲು ಮೈದಾ, ಅರ್ಧ ಬಟ್ಟಲು ಚಿರೋಟಿ ರವೆ, ಚಿಟಿಕೆ ಉಪ್ಪು, ಚೆನ್ನಾಗಿ ಕಾದ ಎರಡು ಚಮಚ ಎಣ್ಣೆ ಹಾಕಿ, ಚೆನ್ನಾಗಿ ಬೆರೆಸಿ ಸ್ವಲ್ಪ ಸ್ವಲ್ಪವೇ ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಮುಚ್ಚಿಡಿ.
ಹೂರಣ ಮಾಡಲು :
ಗೋಡಂಬಿ : ಐವತ್ತು ಗ್ರಾಂ
ಪಿಸ್ತಾ : ಐವತ್ತು ಗ್ರಾಂ
ಬಾದಾಮಿ : ಐವತ್ತು ಗ್ರಾಂ
ಖರ್ಜೂರ : ನೂರು ಗ್ರಾಂ
ಅಂಜೂರ : ಐವತ್ತು ಗ್ರಾಂ
ಗಸಗಸೆ : ಒಂದು ಟೇಬಲ್ ಚಮಚ
ಒಣಕೊಬ್ಬರಿ ತುರಿ –:ಎರಡು ಟೇಬಲ್ ಚಮಚ
ಏಲಕ್ಕಿ ಪುಡಿ : ಸ್ವಲ್ಪ
ಗೋಡಂಬಿ ಬಾದಾಮಿ ಪಿಸ್ತಾ ಸ್ವಲ್ಪ ಹುರಿದು ತಣ್ಣಗಾದ ಮೇಲೆ ಪುಡಿ ಮಾಡಿಡಿ. ಗಸಗಸೆ ಸ್ವಲ್ಪ ಹುರಿದಿಡಿ. ಖರ್ಜೂರ ಮತ್ತು ಅಂಜೂರ ನೀರು ಸೇರಿಸದೆ ರುಬ್ಬಿಡಿ. ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಖರ್ಜೂರದ ಪೇಸ್ಟ್ ಹಾಕಿ ಸ್ವಲ್ಪ ಬೆಚ್ಚಗಾದ ಮೇಲೆ ಗೋಡಂಬಿ ಬಾದಾಮಿ ಪುಡಿ, ಗಸಗಸೆ, ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ. ಸ್ವಲ್ಪ ಬೆಚ್ಚಗಾದ ಮೇಲೆ ಕೈಯಿಂದ ಚೆನ್ನಾಗಿ ಕಲೆಸಿ ಪುಟ್ಟ ಪುಟ್ಟ ಉಂಡೆ ಮಾಡಿಡಿ. ಕಣಕದ ಹಿಟ್ಟಿನಿಂದ ಪುಟ್ಟ ಪುಟ್ಟ ಪೂರಿ ಲಟ್ಟಿಸಿ ಹೂರಣದ ಉಂಡೆ ಇಟ್ಟು ಮೋದಕದ ಆಕಾರದಲ್ಲಿ ಮಡಚಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿದರೆ ಆರೋಗ್ಯಕರವಾದ, ರುಚಿಯಾದ ಡ್ರೈ ಫ್ರೂಟ್ಸ್ ಮೋದಕ ಸವಿಯಲು ಸಿದ್ಧ!