ಡ್ರೈನೇಜ್ ಒಡೆದು ರಸ್ತೆ ಮೇಲೆ ಹರಿಯುತ್ತಿರುವ ಮಲೀನ ನೀರು

ಕಲಬುರಗಿ,ಮಾ.24-ನಗರದ ಶಹಾಬಜಾರ ರಸ್ತೆಯ ಅಗ್ನಿಶಾಮಕದಳ ಕಚೇರಿ ಸಮೀಪದ ಮಹಾಲಕ್ಷ್ಮೀ ಲೇಔಟ್ ಬಳಿ ಡ್ರೈನೇಜ್ ಒಡೆದು ಮಲೀನ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಇದರಿಂದಾಗಿ ವಾಹನ ಸವಾರರು ಮತ್ತು ಬಡಾವಣೆಯ ಜನ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಡ್ರೈನೇಜ್ ಒಡೆದು ರಸ್ತೆಯ ಮೇಲೆ ಮಲೀನ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಅದೇ ನೀರಿನಲ್ಲಿಯೇ ಹಾದು ಹೋಗುವಂತಾಗಿದೆ. ಡ್ರೈನೇಜ್ ಒಡೆದು ಮಲೀನ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಗಬ್ಬು ವಾಸನೆ ಹರಡುತ್ತಿದೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಆದ್ದರಿಂದ ಸಂಬಂಧಪಟ್ಟವರು ಆದಷ್ಟು ಬೇಗ ಡ್ರೈನೇಜ್ ದುರಸ್ತಿಗೊಳಿಸಿ ಜನರಗೆ ಅನುಕೂಲ ಮಾಡಿಕೊಡಬೇಕು ಎಂದು ಮಹಾಲಕ್ಷ್ಮೀ ಬಡಾವಣೆಯ ನಾಗರಿಕರು ಆಗ್ರಹಿಸಿದ್ದಾರೆ.