ಡ್ರಾಗರ್​ನಿಂದ ಚುಚ್ಚಿ ಯುವಕನ‌ ಕೊಲೆ

ಹಾಸನ,ಏ.6-ನಾಯಿ ತರಲು ಹೋದ ಯುವಕನಿಗೆ ಡ್ರಾಗರ್​ನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ದೊಡ್ಡಮಂಡಿಗನಹಳ್ಳಿಯ ಮನೋಜ್ (20) ಮೃತ ಯುವಕನಾಗಿದ್ದಾನೆ.ನಾಯಿ ತರಲು ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದ ಮನೋಜ್​ಗೆ ವಿಜಯನಗರ ಬಡಾವಣೆ ಬಳಿ ಎರಡ್ಮೂರು ಬಾರಿ ಡ್ರ್ಯಾಗರ್​ನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಬಳಿಕ ಆತನ ಶವವನ್ನು ಮೋರಿ ಕೆಳಗೆ ಎಸೆದು ಪರಾರಿಯಾಗಿದ್ದಾರೆ.ಮನೋಜ್ ಸ್ನೇಹಿತರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಪೆನ್ಷನ್ ಮೊಹಲ್ಲಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.