ಡ್ರಮ್‌ನಲ್ಲಿ ಶವ ಪತ್ತೆ ಮೂವರು ಸೆರೆ ಐವರಿಗೆ ಶೋಧ

ಬೆಂಗಳೂರು,ಮಾ.೧೬- ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಡ್ರಮ್‌ನಲ್ಲಿ ಮಹಿಳೆಯ ನಿಗೂಢ ಶವ ಪತ್ತೆ ಪ್ರಕರಣದ ರಹಸ್ಯ ಬೇಧಿಸಿರುವ ರೈಲ್ವೇ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರದ ಅರಾರಿಯಾ ಜಿಲ್ಲೆಯ ತಮನ್ನಾ (೨೭ ಕೊಲೆಯಾದ ಮಹಿಳೆಯಾಗಿದ್ದು ಆಕೆಯನ್ನು ಕೊಲೆಗೈದು ಡ್ರಮ್ ನಲ್ಲಿ ತುಂಬಿ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಇಟ್ಟು ಹೋಗಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ(ಎಸ್ ಪಿ) ಡಾ.ಸೌಮ್ಯಲತಾ ಅವರು ತಿಳಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ಎಂಟು ಆರೋಪಿಗಳು ಭಾಗಿಯಾಗಿದ್ದು ಅವರಲ್ಲಿ ಬಿಹಾರ ಮೂಲದ ಸಿಟಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಮಾಲ್ (೨೧) ತನ್ವೀರ್(೨೪) ಹಾಗೂ ಶಾಕೀಬ್(೨೫) ಸೇರಿ ಮೂವರನ್ನು ಬಂಧಿಸಿ ಉಳಿದವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದರು.
ಕೊಲೆಯಾಗಿ ಭಾಗಿಯಾಗಿ ತಲೆಮರೆಸಿಕೊಂಡಿರುವ ನವಾಬ್ ಹಾಗೂ ಇಂತಿಕಾಬ್ ಸ್ವಂತ ಅಣ್ಣ-ತಮ್ಮರಾಗಿದ್ದು ಈಗಾಗಲೇ ವಿವಾಹವಾಗಿ ಪತಿಯನ್ನು ತೊರೆದಿದ್ದ ತಮನ್ನಾ ಇಂತಿಕಾಬ್ ನನ್ನು ಪುಸಲಾಯಿಸಿ ವಿವಾಹವಾಗಿದ್ದಳು.
ಇದೇ ವಿಚಾರಕ್ಕೆ ಇಂತಿಕಾಮ್ ಮತ್ತು ಸಹೋದರರ ನಡುವೆ ವೈಮನಸ್ಸು ಮೂಡಿದ್ದು ಇದಕ್ಕೆಲ್ಲಾ ತಮನ್ನಾ ಕಾರಣ ಎಂದು ನವಾಬ್ ಆಕ್ರೋಶಗೊಂಡು ಆಕೆಯ ಕೊಲೆಗೆ ಸಂಚು ರೂಪಿಸಿದ್ದ.
ಅದರಂತೆ ಕಳೆದ ಮಾ.೧೨ರಂದು ಆರೋಪಿಗಳು ಕಲಾಸಿಪಾಳ್ಯ ದ ಮನೆಗೆ ತಮನ್ನಾಳನ್ನು ಊಟಕ್ಕೆ ಕರೆದಿದ್ದರು. ಊಟವಾದ ನಂತರ ಜಗಳ ಶುರುವಾಗಿತ್ತು.
ಈ ಜಗಳದಲ್ಲಿ ತಮ್ಮನ್ನಾಳನ್ನು ವೇಲ್‌ನಿಂದ ಬಿಗಿದು ಆರೋಪಿಗಳು ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ಡ್ರಮ್ ನಲ್ಲಿಟ್ಟು ಬಿಹಾರಕ್ಕೆ ಸಾಗಿಸಲು ಯತ್ನಿಸಿದ್ದರು.

ಆದರೆ ಶವ ಸಾಗಿಸಲು ಸಾಧ್ಯವಾಗದೇ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಶವ ಬಿಟ್ಟು ಪರಾಗಿಯಾಗಿದ್ದರು.ಮಾ.೧೪ ರಂದು ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಆವರಣದಲ್ಲಿ ಡ್ರಮ್‌ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಮೂವರಿಂದ ನಾಲ್ಕು ಮಂದಿ ಆರೋಪಿಗಳು ಆಟೋದಲ್ಲಿ ಬಂದು ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಡ್ರಮ್‌ನಲ್ಲಿ ಶವವಿಟ್ಟು ಪರಾರಿಯಾಗಿದ್ದ ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಪ್ರಕರಣದ ತನಿಖೆ ಚುರುಕುಗೊಳಿಸಿ ಮಹಿಳೆಯ ಗುರುತು ಮತ್ತು ಆರೋಪಿಗಳ ಪತ್ತೆಗಾಗಿ ಮೈಸೂರು ಹಾಗೂ ದಾವಣಗೆರೆ ರೈಲ್ವೆ ಇನ್ಸ್?ಪೆಕ್ಟರ್?? ಒಳಗೊಂಡ ಮೂರು ವಿಶೇಷ ತಂಡವನ್ನೂ ರಚಿಸಿ ಕಂಟೋನ್ಮೆಂಟ್ ರೈಲ್ವೆ ಠಾಣೆಯ ಇನ್ಸ್‌ಪೆಕ್ಟರ್ ಪ್ರಭಾಕರ್ ಅವರು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಆರೋಪಿಗಳೆಲ್ಲರೂ ಸ್ಥಳೀಯ ಕೂಲಿ ಕಾರ್ಮಿಕರು ಎನ್ನುವುದು ಪತ್ತೆಹಚ್ಚಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸೌಮ್ಯಲತಾ ಹೇಳಿದರು.
ಪ್ರಕರಣ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ತಂಡಗಳನ್ನು ಡಿಜಿಪಿ ಪ್ರವೀಣ್ ಸೂದ್ ಅವರು ಪ್ರಶಂಸಿಸಿ ೫೦ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ ಎಂದರು.

ಸ್ಟಿಕ್ಕರ್ ನೀಡಿದ ಸುಳಿವು

ಡ್ರಮ್ ನಲ್ಲಿ ಮಹಿಳೆಯ ಶವದ ಗುರುತಿನ ಬಗ್ಗೆ ತಲೆಕೆಡಿಸಿಕೊಂಡಿದ್ದ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರಿಗೆ ಆರೋಪಿಗಳ ಸುಳಿವು ಪತ್ತೆ ಹಚ್ಚುವುದು ಸುಲಭವಾಗಿರಲಿಲ್ಲ. ಕೊನೆಗೆ ಡ್ರಮ್ ಮೇಲಿದ್ದ ಜಮಾಲ್ ಎನ್ನುವ ಸ್ಟಿಕ್ಕರ್ ನೀಡಿದ ಸುಳಿವು ಆಧರಿಸಿ ಮೂವರು ಹಂತಕರನ್ನು ಬಂಧಿಸಿದ್ದಾರೆ.
ಆರೋಪಿ ನವಾಬ್ ತಮನ್ನಾ ಮತ್ತು ಇಂತಿಕಾಬ್ ದಂಪತಿಯನ್ನ ಜಿಗಣಿಯಿಂದ ಬೆಂಗಳೂರು ತೋರಿಸುವುದಾಗಿ ಕರೆತಂದು ಕೊಲೆ ಮಾಡಿದ್ದಾರೆ.ತಮನ್ನಾ ಮೊದಲು ಅಫ್ರೋಜ್ ನನ್ನು ಮದುವೆ ಆಗಿದ್ದು ಆತ ವಿಶೇಷ ಚೇತನನಾಗಿದ್ದರಿಂದ ವಿಚ್ಛೇದನ ಪಡೆದು ಪುಸಲಾಯಿಸಿ ಇಂತಿಕಾಬ್‌ನನ್ನು ವಿವಾಹವಾಗಿ ಜಿಗಣಿಯಲ್ಲಿ ವಾಸವಿದ್ದಳು.
ಅಚ್ಚರಿಯ ಎಂದರೆ ಅಫ್ರೋಜ್ ಇಂತಿಕಾಬ್ ದೊಡ್ಡಪ್ಪನ ಮಗನೇ ಅಗಿದ್ದು ಮತ್ತೊಬ್ಬ ಆರೋಪಿ ನವಾಬ್ ಇಂತಿಕಾಬ್ ಸಹೋದರನಾಗಿದ್ದ.
ನಮ್ಮ ಇಡೀ ಕುಟುಂಬವನ್ನೇ ತಮನ್ನಾ ಹಾಳು ಮಾಡ್ತಿದ್ದಾಳೆ ಎಂದು ಆಕ್ರೋಶಗೊಂಡ ಇಂತಿಕಾಬ್ ಕೊಲೆಗೆ ಸಂಚು ಹೊಡಿ ಮಾ.೧೨ ರಂದು ಪಾರ್ಟಿಗೆ ತಮನ್ನಾ ಕರೆಸಿಕೊಂಡಿದ್ದು ಆಕೆ ಒಬ್ಬಳೇ ಮಹಿಳೆ ಆಗಿದ್ದರಿಂದ ಮತ್ತೋರ್ವ ಮಹಿಳೆಯನ್ನು ಮನೆಯಲ್ಲಿರಿಸಿಕೊಂಡು ಪಾರ್ಟಿ ಮಾಡಿದ್ದರು.
ಕೊನೆಯಲ್ಲಿ ತಮನ್ನಾ ಕುತ್ತಿಗೆಯನ್ನು ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ರಾತ್ರಿ ೧೧.೪೫ ಕ್ಕೆ ರೈಲ್ವೇ ನಿಲ್ದಾಣದಲ್ಲಿ ಡ್ರಮ್?ನಲ್ಲಿ ಮೃತದೇಹವಿಟ್ಟು ಬಂದಿದ್ದಾರೆ.ಅದೇ ಡ್ರಮ್ ಮೇಲೆ ಜಮಾಲ್ ಹೆಸರು ಮತ್ತು ವಿಳಾಸ ಪತ್ತೆಯಾಗಿತ್ತು. ಅದೇ ಸ್ಟಿಕ್ಕರ್ ಆಧಾರದ ಮೇಲೆ ಆರೋಪಿಗಳ ಬಂಧಿಸಿದ್ದಾರೆ.