ಡ್ರಗ್ ಪ್ರಕರಣಕ್ಕೆ ಹೊಸ ತಿರುವು ಖನ್ನಾ ಪಾರ್ಟಿಯಲ್ಲಿ ಕ್ರಿಕೆಟಿಗರು

ಬೆಂಗಳೂರು, ಸೆ. ೧೩- ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ನಶೆ ಪ್ರಕರಣದ ಹೆಜ್ಜೆ ಜಾಡನ್ನು ಬೆನ್ನತ್ತಿರುವ ಸಿಸಿಬಿಗೆ ದಿನಕ್ಕೊಂದಿ ಮಾಹಿತಿಗಳು ಬರುತ್ತಿದ್ದು, ಆರೋಪಿ ವಿರೇನ್ ಪಾರ್ಟಿಗೆ ಕೇವಲ ನಟ. ನಟಿಯರು ಮಾತರ ಬರುತ್ತಿರಲಿಲ್ಲ, ರಾಜಕಾರಣಗಳು, ಉದ್ಯಮಿಗಳ ಜತೆಗೆ ಕ್ರಿಕೆಟ್ ಆಟಗಾರರು ಬರುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಖನ್ನಾನನ್ನು ದೆಹಲಿಯಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದು ಸಿಸಿಬಿ ವಿಚಾರಣೆ ನಡೆಸುತ್ತಿz. ಈತ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರು ಬರುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಯಾವ ಕ್ರಿಕೆಟ್ ಆಟಗಾರರು ಬರುತ್ತಿದ್ದರು ಅವರಿಗೂ ಡ್ರಗ್ಸ್ ಸರಬರಾಜು ಆಗುತ್ತಿತ್ತೆ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ತನಿಖೆ ವೇಳೆ ವಿರೇನ್ ಖನ್ನಾ ಕ್ರಿಕೆಟ್ ಆಟಗಾರರು ಬರುತ್ತಿದ್ದ ವಿಷಯವನ್ನು ಬಾಯ್ಬಿಟ್ಡಿದ್ದಾನೆ. ತಾನಿ ನೀಡುತ್ತಿದ್ದ ಪಾರ್ಟಿಗಳಲ್ಲಿ ನಟಿ ರಾಗಿಣಿ ಎರಡು ಸಲ ಮಾತ್ರ ಬಂದಿದ್ದಾರೆ. ಆದರೆ, ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಆಗಾಗ ಬರುತ್ತಿದ್ದರು. ಇರ ಜತೆಗೆ ಅಂತಾರಾಷ್ಟ್ರೀಯ ಸ್ಟಾರ್ ಹೆಸರುಗಳನ್ನು ಖನ್ನಾ ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಖನ್ನಾಗೆ ಸ್ಯಾಂಡಲ್‌ವುಡ್ ಮಾತ್ರವಲ್ಲ ಬಾಲಿವುಟ್ ನಂಟು ಇದೆ ಎಂದು ಹೇಳಲಾಗುತ್ತಿದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನಿ ಸಂತಸಪಡಿಸಿ ಹಣ ಮಾಡುವುದೇ ಖನ್ನಾನ ಮುಖ್ಯ ಕೆಲಸವಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಟಿದ್ದಾರೆ ಎಂದು ಮೂಲಗಳು ತಿಳಿಸಿವೆ.