ಡ್ರಗ್ಸ್ ಸೇವಿಸಿ‌ ಕ್ರಿಕೆಟ್ ಆಡುತ್ತಿದ್ದ ಇಮ್ರಾನ್- ಸರ್ಫರಾಜ್ ಗಂಭೀರ ಆರೋಪ

ಇಸ್ಲಾಮಾಬಾದ್, ನ 3- ಪಾಕ್ ಪ್ರಧಾನಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಡ್ರಗ್ ಸೇವಿಸಿ ಕ್ರಿಕೆಟ್‌ ಆಡುತ್ತಿದ್ದರು ಎಂದು ಪಾಕ್ ತಂಡದ ಮಾಜಿ ವೇಗದ ಬೌಲರ್ ಸರ್ಫರಾಜ್ ನವಾಜ್ ಗಂಭೀರ ಆರೋಪ ಮಾಡಿದ್ದಾರೆ.
ಈ ಹೇಳಿಕೆ ಪಾಕಿಸ್ತಾನದಲ್ಲಿ ಭಾರೀ ಸಂಕಲನಕ್ಕೆ ಕಾರಣವಾಗಿದೆ.
ಇಮ್ರಾನ್ ಖಾನ್ ಕುರಿತು ನವಾಜ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಮ್ರಾನ್ ಡ್ರಗ್ ಸೇವಿಸುತ್ತಿದದ್ದು ನಾನು ಮಾತ್ರ ನೋಡಿಲ್ಲ. ನಾನು ಹೇಳಿರುವುದು ಸುಳ್ಳು ಎಂದಾದರೆ ನ್ಯಾಯಾಲಯಕ್ಕೆ ನನ್ನನ್ನು ಎಳೆಯಲು ಅವರು ಸ್ವತಂತ್ರರು ಎಂದು ತಿಳಿಸಿದ್ದಾರೆ.
1987ರ ಘಟನೆ ಕುರಿತು ಮಾತನಾಡಿರುವ ಸರ್ಫಾರಾಜ್ ನವಾಜ್, ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಇಮ್ರಾನ್ ಖಾನ್ ಬೌಲಿಂಗ್ ಮಾಡಲು ಸಮಸ್ಯೆ ಎದುರಿಸಿದ್ದರು. ಈ ವೇಳೆ ಇಸ್ಲಾಮಾಬಾದ್‍ನ ಮನೆಗೆ ಬಂದ ಇಮ್ರಾನ್ ಗಾಂಜಾ ಸೇವಿಸಿದ್ದ ಎಂದು ಹೇಳಿದ್ದಾರೆ.

ಇಮ್ರಾನ್ ಖಾನ್ ಕೇವಲ ಗಾಂಜಾ ಮಾತ್ರವಲ್ಲದೇ ಕೊಕೇನ್ ಕೂಡ ತೆಗದುಕೊಳ್ಳುತ್ತಿದ್ದರು. 1987 ರಲ್ಲಿ ಲಂಡನ್‍ನಲ್ಲಿ ನಡೆದ ಪಂದ್ಯದಲ್ಲಿ ಆತ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರಲಿಲ್ಲ. ಆ ವೇಳೆ ನನ್ನ ಮನೆಗೆ ಬಂದು ಅಲ್ಲಿಯೂ ಡ್ರಗ್ ಸೇವನೆ ಮಾಡಿದ್ದ. ಈ ವೇಳೆ ಮೊಹ್ಸಿನ್ ಖಾನ್, ಅಬ್ದುಲ್ ಖಾದಿರ್, ಸಲೀಮ್ ಮಲಿಕ್ ಕೂಡ ಜೊತೆಯಲ್ಲಿ ಆಗಮಿಸಿದ್ದರು ಎಂದು ನವಾಜ್ ಆರೋಪಿಸಿದ್ದಾರೆ.