ಡ್ರಗ್ಸ್ ಸಾಗಾಟ: ಆರೋಪಿ ಸೆರೆ

ವಿಟ್ಲ, ಎ.೮- ಇಲ್ಲಿನ ಪಡೂರು ಗ್ರಮದ ಕೊಡಂಗಾಯಿಯಲ್ಲಿ ಏ. ೬ರ ರಾತ್ರಿ ೭.೩೦ಕ್ಕೆ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಕಾರಿನಲ್ಲಿ ಅಕ್ರಮ ಗಾಂಜಾ ಸಾಗಾಟ ಪತ್ತೆಯಾಗಿದ್ದು, ಸೊತ್ತುಗಳ ಸಹಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮಂಜೇಶ್ವರ ತಾಲೂಕಿನ್ ಅಪಾತೂರು ಕಜೆ ನಿವಾಸಿ ನಾಸಿರ್ ಬಂಧಿತ ಆರೋಪಿ. ಆರೋಪಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಬಾಕ್ರಬೈಲಿನ ಬಾರಿಕ್ ಹಾಗೂ ಪಾತೂರಿನ ಮುಸ್ತಾಫ ತಲೆ ಮರೆಸಿಕೊಂಡಿದ್ದು, ಬಂಟ್ವಾಳದ ಪೊಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ಟಿ.ಡಿ ನಾಗರಾಜ್ ತನಿಖೆ ಮುಂದುವರಿಸಿದ್ದಾರೆ. ಆರೋಪಿಯಿಂದ ೨ಲಕ್ಷ ರೂ ಮೌಲ್ಯದ ಆಲ್ಟೋ ಕಾರು, ೨೦ ಸಾವಿರ ರೂ. ಮೌಲ್ಯದ ೨ ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.