ಡ್ರಗ್ಸ್ ಶೇಖರಸಿ ಮಾರಾಟ; ನಾಲ್ವರು ಗ್ಯಾಂಗ್ ಸೆರೆ

ಬೆಂಗಳೂರು,ಜ.೧೮- ಮಾದಕ ವಸ್ತು ಎಂಡಿಎಂಎ ಕ್ರಿಸ್ಟೇಲ್ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಗ್ಯಾಂಗ್ ನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಸಿಂಗಾಪುರ ವರದರಾಜನಗರ ಶೇಖ್ ಅಲಿ(೪೭) ಶೇಖ್ ಸಲ್ಮಾನ್(೨೪)ವಿಲ್ಸನ್ ಗಾರ್ಡನ್ ಮುಜಾಮಿಲ್(೩೪)ಹಾಗೂ ಲಕ್ಷ್ಮೀನಾರಾಯಣಪುರದ ವಿನೋದ್ ಕುಮಾರ್ ಅಲಿಯಾಸ್ ಚಿನ್ನು(೩೪) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.


ಬಂಧಿತರಿಂದ ಆರೋಪಿಗಳಿಂದ ೨,೩೯,೮೦೦ ನಗದು ಸೇರಿ ೯ ಲಕ್ಷ ಮೌಲ್ಯದ ೨ ಕೆ.ಜಿ. ೩೮೦ ಗ್ರಾಂ ಗಾಂಜಾ,೫೬ ಗ್ರಾಂ ಎಂಡಿಎಂಎ. ಕ್ರಿಸ್ಟೇಲ್, ೨ ಮೊಬೈಲ್, ೨ ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ
ಸಿಂಗಾಪುರದ ಕಾನ್ಶೀರಾಮ್‌ನಗರ, ಕೆರೆಯ ಪಕ್ಕದಲ್ಲಿರುವ ಮನೆಯೊಂದರಲ್ಲಿ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟೇಲ್‌ಗಳನ್ನು ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ
ವಿದ್ಯಾರಣ್ಯಪುರ ಪೊಲೀಸ್ ಇನ್ಸ್‌ಪೆಕ್ಟರ್ ಸುಂದರ ಮತ್ತವರ ಸಿಬ್ಬಂದಿ ಮನೆಯ ಮೇಲೆ ದಾಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡಲು ತಮಗೆ ಪರಿಚಯವಿರುವ ಆಸಾಮಿಗಳಿಂದ ಎಂಡಿಎಂಎ ಕ್ರಿಸ್ಟೇಲ್ ಹಾಗೂ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ಶೇಖರಣೆ ಮಾಡಿ ಚಿಕ್ಕ ಚಿಕ್ಕ ಪ್ಯಾಕೆಟ್ ಗಳಾಗಿ ಕಟ್ಟಿ ಪರಿಚಯಸ್ಥ ಗಿರಾಕಿಗಳಿಗೆ ಒಂದು ಗ್ರಾಂ ಎಂಡಿಎಂಎ ಕ್ರಿಸ್ಟೆಲ್ ಅನ್ನು ೮ರಿಂದ ೧೦ ಸಾವಿರದಂತೆ ಹಾಗೂ ೧೦ ಗ್ರಾಂ ಗಾಂಜಾವನ್ನು ೧ರಿಂದ ೨ ಸಾವಿರದ ವರೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಹೇಳಿದರು.