ಡ್ರಗ್ಸ್ ಮುಕ್ತ ರಾಜ್ಯವೇ ಬಿಜೆಪಿ ಉದ್ದೇಶ

ಹಿರಿಯೂರು.ಸೆ.೧೬ : ಡ್ರಗ್ಸ್ ಮುಕ್ತ ಕರ್ನಾಟಕವೇ ಬಿಜೆಪಿ ಸರ್ಕಾರದ ಉದ್ದೇಶ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ಭಾರತೀಯ ಜನತಾ ಪಕ್ಷ ಹಿರಿಯೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಸಹಿ ಸಂಗ್ರಹಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಡ್ರಗ್ಸ್ ದಂಧೆಯಲ್ಲಿ ತೊಡಗಿರುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಡ್ರಗ್ಸ್ ವಿರುದ್ಧ ದೊಡ್ಡ ಸಮರವೇ ನಡೆಯುತ್ತಿದೆ ಎಂದರು. ರಾಜ್ಯ ಬಿಜೆಪಿ ಮುಖಂಡ ಡಿ.ಟಿ.ಶ್ರೀನಿವಾಸ್ ಮಾತನಾಡಿ ಡ್ರಗ್ಸ್ ದಂಧೆ ವ್ಯಾಪಕವಾಗಿ ಹರಿಡಿರುವುದು ಶೋಚನೀಯ ವಿಚಾರ ಎಂದು ಹೇಳಿದರು. ಡ್ರಗ್ಸ್ ದಂಧೆ ಮಾಡುವ ವಿಚಾರ ತಿಳಿದು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಲ್ಲರೂ ಡ್ರಗ್ಸ್ ವಿರುದ್ಧದ ಅಭಿಯಾನದಲ್ಲಿ ಕೈಜೋಡಿಸಿ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ರಾಜೇಶ್ವರಿ, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಎಂ.ಎಸ್.ರಾಘವೇAದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾಮೇಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರಾಧ್ಯ, ಮಂಜುನಾಥ್, ಕೇಶವಮೂರ್ತಿ, ಗಂಗಾಧರ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಜಯರಾಮಯ್ಯ, ಯಶವಂತ ರಾಜ್, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮಂಜುಳಾ, ಸದಸ್ಯರಾದ ಬಾಲಕೃಷ್ಣ, ಮಹೇಶ್ ಪಲ್ಲವ, ಚಿರಂಜೀವಿ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ವೆಂಕಟೇಶ್, ಎಂ.ವಿ. ಹರ್ಷ, ಶೋಭಾ, ವಾಣಿಶ್ರೀ, ಲಲಿತಮ್ಮ ಮತ್ತಿತರರು ಪಾಲ್ಗೊಂಡಿದ್ದರು.