ಡ್ರಗ್ಸ್ ಜಾಲ: ಕೇರಳದ ಮಾಜಿ ಸಚಿವರ ಪುತ್ರ ಬಿನೇಶ್‌ಗೆ ಎನ್ ಸಿಬಿ ಡ್ರಿಲ್


ಬೆಂಗಳೂರು,ನ.೧೨-ಡ್ರಗ್ಸ್ ಜಾಲ ಪ್ರಕರಣದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೇರಳದ ಮಾಜಿ ಗೃಹ ಸಚಿವ ಬಾಲಕೃಷ್ಣನ್ ಕೊಡಿಯೇರಿ ಪುತ್ರ ಬಿನೇಶ್ ಕೊಡಿಯೇರಿಯ ವಿಚಾರಣೆಗೆ ಎನ್?ಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.
ಎನ್?ಸಿಬಿಯಿಂದ ಬಂಧಿತನಾಗಿರುವ ಪ್ರಮುಖ ಆರೋಪಿ ಮೊಹಮ್ಮದ್ ಅನೂಪ್ ಜೊತೆ ವಹಿವಾಟು ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿರುವುದರಿಂದ ಬಿನೇಶ್? ನನ್ನು ಎನ್?ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ತನಿಖೆ ವೇಳೆ ಬಿನೇಶ್ ಬೆಂಗಳೂರು ಹಾಗೂ ಕೇರಳದಲ್ಲಿ ಐಷಾರಾಮಿ ಹೋಟೆಲ್ ನಡೆಸುತ್ತಿರುವುದು ಹೋಟೆಲ್?ಗಳಿಂದ ಬಿನೇಶ್ ಅಕೌಂಟ್??ಗೆ ಬಹಳಷ್ಟು ಹಣ ಜಮಾವಣೆ ಆಗಿರುವ ವಿಚಾರ ಬೆಳಕಿಗೆ ಬಂದಿದೆ.
ಕೇವಲ ಹೋಟೆಲ್ ಉದ್ಯಮ ನಡೆಸಿ ಅಷ್ಟು ಹಣಗಳಿಸಲು ಸಾಧ್ಯವಿಲ್ಲ ಎಂಬ ಶಂಕೆಯಿಂದ ಈ ಹಣದ ಮೂಲ ಪತ್ತೆ ಹಚ್ಚುವ ಕೆಲಸವಾಗುತ್ತಿದೆ.
ಇನ್ನು ಎನ್?ಸಿಬಿಯಿಂದ ಬಂಧಿತನಾಗಿರುವ ಪ್ರಮುಖ ಆರೋಪಿ ಮೊಹಮ್ಮದ್ ಅನೂಪ್ ಜೊತೆ ಬಿನೇಶ್ ವಹಿವಾಟು ನಡೆಸುತ್ತಿದ್ದ ಎಂಬ ವಿಚಾರ ಎನ್?ಸಿಬಿ ಗಮನಕ್ಕೆ ಬಂದಿದೆ. ನಗರದ ಕಮ್ಮನಹಳ್ಳಿಯಲ್ಲಿರುವ ರೆಸ್ಟೋರೆಂಟ್??ನಲ್ಲಿ ಡ್ರಗ್ ಪೆಡ್ಲಿಂಗ್ ನಡೆಯುತ್ತಿರುವ ವಿಚಾರಕ್ಕೆ ಬೇಕಾದ ಸಾಕ್ಷಿ ಎನ್?ಸಿಬಿ ಕೈಯಲ್ಲಿದೆ. ಹೀಗಾಗಿ ಸದ್ಯ ಎನ್?ಸಿಬಿ ಅಧಿಕಾರಿಗಳು ಬಿನೇಶ್ ಕೊಡಿಯೇರಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಪರಪ್ಪನ ಅಗ್ರಹಾರದಲ್ಲಿರುವ ಮೊಹಮ್ಮದ್ ಅನೂಪ್ ಹಾಗೂ ಬಿನೇಶ್ ಕೊಡಿಯೇರಿಯ ತನಿಖೆ ಮಾಡಿ ಮಾಹಿತಿ ಪಡೆಯುವ ಸಾಧ್ಯತೆ ಇದೆ.