ಡ್ರಗ್ಸ್ ಜಾಲ‌ ಹೈದರಾಬಾದ್ ನ ಇಬ್ಬರು ಉದ್ಯಮಿಗಳಿಗೆ ನೋಟೀಸ್

ಬೆಂಗಳೂರು,ಏ.4- ಡ್ರಗ್ಸ್ ಜಾಲ‌ ಪ್ರಕರಣದ ಸಂಬಂಧಿಸಿದಂತೆ ಬಂಧಿತ ನಿರ್ಮಾಪಕ ಶಂಕರೇಗೌಡ ಸಂಪರ್ಕದಲ್ಲಿದ್ದ‌ ಹೈದರಾಬಾದ್ ಮೂಲದ ಇಬ್ಬರು ಉದ್ಯಮಿಗಳಿಗೆ ಗೋವಿಂದಪುರ ಪೊಲೀಸರು ನೋಟಿಸ್ ನೀಡಿದ್ದಾರೆ.
ನಿರ್ಮಾಪಕ ಶಂಕರೇಗೌಡ ಸಂಪರ್ಕದಲ್ಲಿದ್ದ ಉದ್ಯಮಿಗಳಾದ ರತನ್ ರೆಡ್ಡಿ ಮತ್ತು ಕಲಹಾರ್ ರೆಡ್ಡಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ‌ಮಾಡಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ‌ ತಿಳಿಸಿದ್ದಾರೆ.
ಬಂಧಿತ ಶಂಕರೇಗೌಡ ಅವರ ಜೊತೆ ಸೇರಿ ಇಬ್ಬರು ಉದ್ಯಮಿಗಳು ಹಲವಾರು ಕಡೆ ಡ್ರಗ್ಸ್ ಪಾರ್ಟಿ ಆಯೋಜಿಸಿದ್ದರು. ಈ ಮೊದಲು ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ರತನ್ ರೆಡ್ಡಿ ಹಾಗೂ ಕಲಹಾರ್ ರೆಡ್ಡಿ ಪಾರ್ಟಿ ಆಯೋಜಿಸುತ್ತಿದ್ದರು.
ತೆಲಂಗಾಣ ಮೂಲದ ಶಾಸಕರನ್ನು ಕೂಡ ಡ್ರಗ್ಸ್ ಪಾರ್ಟಿಗೆ ಕರೆತರುತ್ತಿದ್ದ. ಐದಾರು ಬಾರಿ ನಾಲ್ವರು ಶಾಸಕರು ಬಂದು ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಈ ನಾಲ್ವರು ಶಾಸಕರನ್ನು ಡ್ರಗ್ಸ್ ಪಾರ್ಟಿಗೆ ನಿರಂತರವಾಗಿ ಕರೆತರುತ್ತಿದ್ದ.
ನಾಲ್ಕೈದು ಬಾರಿ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಕಲೆ ಹಾಕಿರುವ ಇನ್ಸ್‌ಪೆಕ್ಟರ್ ಪ್ರಕಾಶ್, ಕಲಹಾರ್ ರೆಡ್ಡಿ ವಿಚಾರಣೆ ಬಳಿಕ ನಾಲ್ವರು ಶಾಸಕರಿಗೂ ನೋಟಿಸ್ ನೀಡಲು ಸಿದ್ಧತೆ‌ ನಡೆಸಿದ್ದಾರೆ.
ಪೆಡ್ಲರ್ ಬಳಿ ಡ್ರಗ್ಸ್ ತರಿಸಿಕೊಂಡು ಪಾರ್ಟಿ ಆಯೋಜಿಸ್ತಿದ್ದ ಕಲಹಾರ್ ರೆಡ್ಡಿ, ಬೆಂಗಳೂರು ಸೇರಿ ಹೈದರಾಬಾದ್​ನಲ್ಲೂ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು. ಶಂಕರೇಗೌಡನ ಮೂಲಕ ಹೈದರಾಬಾದ್​ಗೆ ಡ್ರಗ್ಸ್ ತರಿಸಿಕೊಂಡು ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.