ಡ್ರಗ್ಸ್ ಜಾಲ‌ ಕೇರಳದ ಮಾಜಿ ಗೃಹ ಸಚಿವರ ಪುತ್ರ ಕೊಡಿಯೇರಿ‌ಗೆ ಇಡಿ ಗಾಳ

ಬೆಂಗಳೂರು,ಅ. 25-ನಗರದಲ್ಲಿ ಕಳೆದ ವಾರ ಬಂಧಿಸಿದ ಡ್ರಗ್ ಪೆಡ್ಲರ್ ಕೇರಳದ ಮಾಜಿ ಗೃಹ ಸಚಿವ ಹಾಗೂ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೇಶ್‌ ಕೊಡಿಯೇರಿ
ಅಕ್ರಮವಾಗಿ 50 ಲಕ್ಷ ರೂಗಳ ಬ್ಯಾಂಕ್ ವಹಿವಾಟು ನಡೆಸಿರುವ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.
ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ
ಕಳೆದ ವಾರ ನಗರದಲ್ಲಿ ಎನ್‌ಸಿಬಿ ಅಧಿಕಾರಿಗಳು ಬಿನೇಶ್‌ ಕೊಡಿಯೇರಿಯನ್ನು ಬಂಧಿಸಿದ್ದು 50 ಲಕ್ಷ ರೂಗಳ ವ್ಯವಹಾರವನ್ನು ನಡೆಸಿರುವುದನ್ನು ಪತ್ತೆ ಹಚ್ಚಿದ್ದರು.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಅನಿಕಾ ಡಿ., ರವೀಂದ್ರನ್ ಆರ್. ಎ. ಜೊತೆ ಅನೂಪ್ ಸಂಪರ್ಕ ಹೊಂದಿದ್ದ
ಮೊಹಮದ್ ಅನೂಪ್‌ನನ್ನು ಇಡಿ ಅಧಿಕಾರಿಗಳು ಕಚೇರಿಯಲ್ಲಿ ವಿಚಾರಣೆ ನಡೆಸಿದರು. ಆದರೆ, ಆತ ವಿಚಾರಣೆಗೆ ಸಹಕಾರ ನೀಡದ ಕಾರಣ ವಶಕ್ಕೆ ಪಡೆದು ವಿಚಾರಣೆಯನ್ನು ಮುಂದುವರೆಸಿದ್ದಾರೆ.
ಬಿನೇಶ್‌ ಕೊಡಿಯೇರಿ ಮತ್ತು ಅನೂಪ್ ಸಂಬಂಧದ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡಲಿದ್ದಾರೆ. 50 ಲಕ್ಷದಷ್ಟು ಹಣ ವರ್ಗಾವಣೆ ಆಗಿದ್ದು ಏಕೆ? ಎಂಬುದು ಕುತೂಹಲ ಮೂಡಿಸಿರುವ ಅಂಶವಾಗಿದೆ.
ಮೊಹಮದ್ ಅನೂಪ್‌ 2015ರಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದ. ಈ ಇದರಲ್ಲಿ ಬಿನೇಶ್ ಕೊಡಿಯೇರಿ ಪಾಲುದಾರಿಕೆ ಹೊಂದಿದ್ದಾರೆ ಎಂಬ ಆರೋಪವೂ ಇದೆ. ಆದರೆ, ಕೊಡಿಯೇರಿ ಕುಟುಂಬ ಸದಸ್ಯರು ಇದನ್ನು ನಿರಾಕರಿಸಿದ್ದಾರೆ.
ಇನ್ನು ಕೇರಳದಲ್ಲಿ ಪತ್ತೆಯಾದ ಚಿನ್ನ ಸಾಗಣೆ ಪ್ರಕರಣದಲ್ಲಿಯೂ ಬಿನೇಶ್ ಕೊಡಿಯೇರಿ ಹೆಸರು ಹೇಳಿ ಬರುತ್ತಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣದಲ್ಲಿಯೂ ಹೆಸರು ಕೇಳಿ ಬರುತ್ತಿದೆ. ಅಗತ್ಯವಿದ್ದರೆ ಪುನಃ ವಿಚಾರಣೆಗೆ ಹಾಜರಾಗಬೇಕು ಎಂದು ಇಡಿ ಬಿನೇಶ್ ಕೊಡಿಯೇರಿಗೆ ಸೂಚನೆ ನೀಡಿದೆ.