ಡ್ರಗ್ಸ್‌ಪಾರ್ಟಿ ನಟ ಕಪೂರ್‌ಗೆ ಮತ್ತೆ ಸಂಕಷ್ಟ

ಬೆಂಗಳೂರು,ಜು.೨೦- ಸ್ಟಾರ್ ಹೊಟೇಲ್‌ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಿದ್ಧಾಂತ್ ಕಪೂರ್‌ಗೆ ಸಂಕಷ್ಟ ಎದುರಾಗಿದ್ದು, ಡ್ರಗ್ಸ್ ಪೆಡ್ಲರ್‌ಗಳ ಮಾಹಿತಿ ಪಡೆಯಲು ಹಲಸೂರು ಪೊಲೀಸರು ನೋಟೀಸ್ ಜಾರಿಗೆ ಮುಂದಾಗಿದ್ದಾರೆ.
ವಾಟ್ಸ್ ಆಪ್ ಹಾಗೂ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಸಿದ್ಧಾಂತ್ ಕಪೂರ್ ಒಂದು ಬಾರಿ ವಿಚಾರಣೆ ಮಾಡಿ ಪೊಲೀಸರು ಕಳುಹಿಸಿದ್ದರು.
ಸದ್ಯ ಸಿದ್ಧಾಂತ್ ಕಪೂರ್ ಅನ್ನು ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಯುತ್ತಿದೆ. ನಟಿ ಶ್ರದ್ಧಾ ಕಪೂರ್ ಸಹೋದರನಿಗೆ ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.
ಪಾರ್ಟಿಯಲ್ಲಿ ಅಂದು ನೀರಿನಲ್ಲಿ ಯಾರೋ ಏನೋ ಬೆರೆಸಿ ಕೊಟ್ಟಿದ್ದರು ಎಂದಿದ್ದ ಸಿದ್ಧಾಂತ್ ಕಪೂರ್. ಪಾರ್ಟಿ ನಡೆದ ದಿನ ಮಾಡಿಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಸಿದ್ಧಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿದ್ದು ಸಾಬೀತಾಗಿತ್ತು. ಈ ಹಿನ್ನೆಲೆ ಮತ್ತೊಮ್ಮೆ ವಿಚಾರಣೆ ನಡೆಸಲು ಪೊಲೀಸರು ತಯಾರು ನಡೆಸಿದ್ದಾರೆ.