ಡ್ಯಾಮ್ ನಲ್ಲಿ ಮುಳುಗಿ ಸಾರಿಗೆ ನೌಕರ ಸಾವು

ಕೋಲಾರ, ನ. 25-ಮಾರ್ಕಂಡೇಯ ಡ್ಯಾಮ್ ನಲ್ಲಿ ಈಜಲು ಹೋಗಿ ಸಾರಿಗೆ ನೌಕರ ಸಾವು,

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಮಾರ್ಕಂಡೇಯ ಡ್ಯಾಮ್ ನಲ್ಲಿ ಘಟನೆ,

ತಾಲೂಕಿನ ಹಿರೇ ಕರಪನಹಳ್ಳಿ ಗ್ರಾಮದ ಹರೀಶ್(35) ಸಾವನ್ನಪ್ಪಿದ್ದಾರೆ.

ಬಂಗಾರಪೇಟೆಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮೃತ ಹರೀಶ್ ಅವರು ಸ್ನೇಹಿತರೊಂದಿಗೆ ಮಾರ್ಕಂಡೇಯ ಡ್ಯಾಮ್ ನಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿದ ಮೃತರಾಗಿದ್ದಾರೆ.

ಸ್ಥಳೀಯರಿಂದ ಹರೀಶ್ ನನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ್ದರುಸಾಧ್ಯವಾಗಿಲ್ಲ,

ಮೃತ ಹರೀಶ್ ಶವವನ್ನು ಬಂಗಾಪೇಟೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದ್ದು ಘಟನೆಗೆ ಸಂಬಂಧಿಸಿದಂತೆಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ, ದಾಖಲಿಸಿಕೊಳ್ಳಲಾಗಿದೆ.