ಡ್ಯಾನ್ಸ್ ಕಲೆ ಉಳಿಸಿ ಬೆಳೆಸಿ

ಹುಮನಾಬಾದ :ಮೇ.29: ನೃತ್ಯ ಕಲೆ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಶ್ರಮಿಸಬೇಕೆಂದು ಹಾಸ್ಯ ಕಲಾವಿದ ರೇವಣಸಿದಯ್ಯಾ ಸ್ವಾಮಿ ತಾಲೂಕಿನ ಮಾಣಿಕನಗರ ವೀರಭದ್ರೇಶ್ರ ಮಹಾವಿದ್ಯಾಲಯದಲ್ಲಿ ಶಿವ ಕಲಾವಿದರ ಸಂಘ ಬೇಸಿಗೆ ಶಿಬಿರ ಅಂಗವಾಗಿ ಹಮ್ಮಿಕೊಂಡಿದ ಡ್ಯಾನ್ಸ ಸಮರೋಪ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಾ ತಿಳಿಸಿದರು.
ಶಿವ ಕಲಾವಿದರ ಸಂಘ ಡ್ಯಾನ್ಸ ಕಲೆ ಉಳಿಸಲು ಬೀದರ ಜಿಲ್ಲೆಯಲ್ಲಿ ಹಲವಾರು ತರಬೇತಿ ಶಿಬಿರ ಹಮ್ಮಿಕೊಂಡು ಡ್ಯಾನ್ಸ ತರಬೇತಿ ನೀಡುತ್ತಿರು ಕೆಲಸ ಶ್ಲಾಘನಿಯ ಎಂದರು. ಶಿವ ಕಲಾವಿದರ ಸಂಘದ ಅಧ್ಯಕ್ಷರಾದ ಶಿವ ರಾಠೋಡ ಪ್ರಾಸ್ಥವಿಕ ಮಾತನಾಡಿ ಹುಮನಾಬಾದ ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಡ್ಯಾನ್ಸ ತರಬೇತಿ ನೀಡಲಾಗುತ್ತಿದೆ ಎಂದರು. ರಾಜಕುಮಾರ ಬುರೇಶ, ಗುಂಡಪ್ಪಾ ದೊಡ್ಡಮನಿ ಹಾಗೂ ಇತರರಿದ್ದರು.