ಡ್ಯಾನ್ಸ್ ಅಪ್ಪು ಡ್ಯಾನ್ಸ್ ಕಾರ್ಯಕ್ರಮ ಯಶಸ್ವಿಯಾಗಲಿ __ಬಿರಾದಾರ

ರಾಯಚೂರು.ಜ.೧೨-ನಗರದ ರಂಗಮಂದಿರದಲ್ಲಿ ಇಂದು ಡಾನ್ಸ್ ಅಪ್ಪು ಡಾನ್ಸ್ ಕಾರ್ಯಕ್ರಮ ನಡೆಯುತ್ತಲಿದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೃತ್ಯಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೀರಿ ತಮಗೆ ಅಭಿನಂದನೆಗಳು. ಬೇರೆ ಜಿಲ್ಲೆಯವರು ನಮ್ಮ ಜಿಲ್ಲೆಯನ್ನು ಬಿಸಿಲಿನ ನಾಡೆ೦ದು ಗುರ್ತಿಸಿದ್ದಾರೆ. ಹೌದು ನಮ್ಮದು ಬಿಸಿಲುನಾಡು ಹೌದು. ರಾಜ್ಯಕ್ಕೆ ಬೆಳಕು ನೀಡುವ ಶಕ್ತಿನಗರವನ್ನು ಒಳಗೊಂಡ ಜಿಲ್ಲೆಯೂ ಹೌದು. ಚಿನ್ನದ ನಾಡು ಹೌದು ಹತ್ತಿಯ ಬೆಳೆವ ನಾಡು. ಕವಿಗಳ ಹಾಗೂ ದಾಸರ ಬಿಡು ಹೌದು. ರಾಜು ಅವರ ನೇತೃತ್ವದಲ್ಲಿ ಡ್ಯಾನ್ಸ್ ಅಪ್ಪು ಡ್ಯಾನ್ಸ್ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಇಂದು ನಡೆಯುತ್ತಲಿದೆ. ಇದರಲ್ಲಿ ಪಾಲ್ಗೊಂಡಿರುವ ಎಲ್ಲಾ ನೃತ್ಯಪಟು ನೃತ್ಯ ಕಲೆಯನ್ನು ಅನಾವರಣ ಗೊಳಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು. ರಾಜು ರವರು ಮತ್ತು ಅವರ ಸ್ನೇಹಿತರು ಬಹಳ ಪರಿಶ್ರಮದಿಂದ ಈ ಸ್ಪರ್ಧೆನು ಏರ್ಪಡಿಸಿದ್ದಾರೆ ಅವ್ರಿಗೆ ಜಿಲ್ಲೆಯ ಜನತೆ ಪರವಾಗಿ ವಿಶೇಷ ಅಭಿನಂದನೆಗಳನ್ನು ಸಲ್ಲಿಸಲಾಗುತ್ತದೆ.
ಪ್ರಾರಂಭದಲ್ಲೇ ಭಕ್ತಿ ಗೀತೆಗಳಿಗೆ ಸಂಬಂಧಪಟ್ಟಂತೆ ಎರಡು ಟ್ರಯಲ್ ಹಾಡುಗಳಿಗೆ ನೃತ್ಯವನ್ನು ಚೆನ್ನಾಗಿ ಮಾಡಿದ್ರು. ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ನಗದು ರೂಪದಲ್ಲಿ ನೀಡಲು ಆಯೋಜಕರು ವ್ಯವಸ್ಥೆ ಮಾಡಿದ್ದಾರೆ, ಒಟ್ಟಾರೆಯಾಗಿ ರಾಯಚೂರಿನ ನಡೆಯುತ್ತಿರುವ ಬಿಗ್ಗೆಸ್ಟ್ ಡ್ಯಾನ್ಸ್ ರಿಯಾಲಿಟಿ ಶೋ .ಡ್ಯಾನ್ಸ್ ಅಪ್ಪು ಡ್ಯಾನ್ಸ್ ಅರ್ಥಪೂರ್ಣವಾಗಿ ಯಶಸ್ವಿಯಾಗಲಿ ಎಂದು ರವಿವಾರದಂದು ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಡ್ಯಾನ್ಸ್ ಅಪ್ಪು ಡ್ಯಾನ್ಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕನ್ನಡ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ದಂಡಪ್ಪ ಬಿರಾದಾರ್ ಮಾತನಾಡಿದರು. ಕಾರ್ಯಕ್ರಮದ ಸಂಘಟಕರಾದ ರಾಜು ಅವರು ಮಾತನಾಡುತ್ತಾ, ನಾನು ಮತ್ತು ನನ್ನ ಸ್ನೇಹಿತರು ಬಹಳ ಪರಿಶ್ರಮ ಪಟ್ಟು ಈ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಿದು ನಮ್ಮ ಬಿರಾದರ ಸರ್ ಅವರು ಯುವಕರಿಗೆ ಮತ್ತು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವಂಥ ಕೆಲಸವನ್ನು ಮಾಡುತ್ತಿದ್ದಾರೆ.
ರಾಯಚೂರಿನಲಿ ಬಿಗ್ಗೆಸ್ಟ್ ರಿಯಾಲಿಟಿ ಡ್ಯಾನ್ಸ್ ಷೋ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು. ಕಾರ್ಯಕ್ರಮದಲ್ಲಿ ಸಂತೋಷ್ ಕೆ.ಆರ್.ರಾಜು, ಮಂಜು, ವೀರೇಶ್, ತಳವಾರ, ಸಚಿನ್, ರಾಕೇಶ್, ಶ್ರೀನಿವಾಸ್, ಗುರು ರೆಡ್ಡಿ ಮತ್ತು ಕೆ. ಶ್ರೀನಿವಾಸ್, ನ೦ದು ಮುಂತಾದವರು ಇದ್ದರು. ರಂಜಿನಿಯವರು ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು ನಂತರ ವಿವಿಧ ಜಿಲ್ಲೆಗಳಿಂದ ಆಗಮಿಸಿದ ನೃತ್ಯಪಟುಗಳಿಂದ ಸ್ಪರ್ಧಾ ಕಾರ್ಯಕ್ರಮ ಪ್ರಾರಂಭವಾಯಿತು.

ಧನ್ಯವಾದಗಳೊಂದಿಗೆ,