ಡ್ಯಾಂ ಬಳಿ ಪೋಟೋ ತೆಗೆಯಲು ಹೋದ ಮೂವರು ನೀರುಪಾಲು

ವಿಶಾಖಪಟ್ಟಣ,(ಆಂಧ್ರಪ್ರದೇಶ),ಮೇ.31- ಆಪಾಯಕಾರಿ‌ ಸ್ಥಳದಲ್ಲಿ ನಿಂತು‌ ಪೋಟೋ ತೆಗೆಯಲು ಹೋದ ಮೂವರು ಯುವಕರು ಜಲಾಶಯಕ್ಕೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ತಿಗಲವಲಸ ಬಳಿಯ ಗುಡ್ಡಿಗುಮ್ಮಿ ಜಲಾಶಯದಲ್ಲಿ ನಡೆದಿದೆ.
ತಿಗಲವಲಸ ಬಳಿಯ ಗುಡ್ಡಿಗುಮ್ಮಿ ಜಲಾಶಯದ ಬಳಿ‌ ನಿನ್ನೆ ಮಧ್ಯಾಹ್ನ ಹತ್ತು ಮಂದಿ ಯುವಕರು ತೆರಳಿದ್ದರು.
ಈ ವೇಳೆ ಅಪಾಯಕಾರಿ ಸ್ಥಳದಲ್ಲಿ ನಿಂತು ಫೋಟೋ ತೆಗೆಯುವಾಗ ಒಬ್ಬ ಕಾಲುಜಾರಿ ಜಲಪಾತಕ್ಕೆ ಬಿದ್ದಿದ್ದಾನೆ. ಅವನನ್ನು ಉಳಿಸಲು ಮತ್ತಿಬ್ಬರು ಮುಂದಾಗಿ ಅವರೂ ಕೂಡ ಕೊಚ್ಚಿಹೋಗಿದ್ದಾರೆ. ನೀರು ಪಾಲಾದ ಈ ಮೂವರ ಶವಗಳನ್ನು ಹೊರತೆಗೆಯಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಧಾವಿಸಿ ಶವ ಪತ್ತೆ ಕಾರ್ಯಾಚರಣೆ ನಡೆಸಿದ್ದು ಮೊದಲಿಗೆ ಎರಡು ಶವಗಳು ಪತ್ತೆಯಾಗಿದರೆ, ಕೆಲ ಸಮಯದ ನಂತರ ಮತ್ತೊಂದು ಶವವನ್ನು ಪತ್ತೆಹಚ್ಚಿ ಹೊರತರಲಾಗಿದೆ.