ಡೋರ ಸಮುದಾಯಕ್ಕೆ ಶೇ.6ರ ಮೀಸಲಾತಿಗೆ ಆಗ್ರಹ

ವಿಜಯಪುರ :ಎ.10: ಒಳ ಮೀಸಲಾತಿ ವರ್ಗೀಕರಣದಲ್ಲಿ ಆರ್ಥಿಕವಾಗಿ ಹಿಂದುಳಿದ ಡೋಹರ ಕಕ್ಕಯ್ಯ ಸಮಾಜವನ್ನು ಅವೈಜ್ಞಾನಿಕವಾಗಿ 4ನೇ ಗುಂಡಿನಲ್ಲಿರಿಸಲಾಗಿದೆ. ಇದು ಸಮುದಾಯಕ್ಕಾದ ದೊಡ್ಡ ಅನ್ಯಾಯ ಹಾಗೂ ಮುಂದಿನ ಪೀಳಿಗೆಯ ಭವಿಷ್ಯ ಸಂಪೂರ್ಣ ಹಾಳಾಗುತ್ತದೆ ಎಂದು ವಿಜಯಪುರ ನಗರ ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ಜಯಪ್ರಕಾಶ ಮಸಾಜಿ ಪೋಳ ಕರ್ನಾಟಕ ರಾಜ್ಯ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
12ನೇ ಶತಮಾನದಲ್ಲಿ ಚರ್ಮಗಾರಿಕೆ ವೃತ್ತಿ ಮಾಡುತ್ತಿರುವ ಸಮಾಜ ನಮ್ಮದು. ಹಾಗೂ ಕರ್ನಾಟಕದಾದ್ಯಂತ ಸುಮಾರು 15 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಚರ್ಮ ಹದ ಮಾಡುವದು ನಮ್ಮ ಕುಲ ಕಸಬು ಆಗಿರುತ್ತದೆ. ಡೋರ ಸಮುದಾಯವನ್ನು ಅಲೆಮಾರಿ ಜನಾಂಗವೆಂದು ಅರ್ಥೈಹಿಸಿಕೊಂಡು 4ನೇ ಗುಂಪಿನ 89 ಜಾತಿಗಳೊಂದಿಗೆ ಸೇರಿಸಿ ಕೇವಲ ಶೇ. 1ರ ಮೀಸಲಾತಿ ನಿಗದಿಪಡಿಸಿರುವದು. ನಮ್ಮ ಡೋಹರ ಜನಾಂಗಕ್ಕೆ ಅನ್ಯಾಯ ಮಾಡಿದಂತಾಗಿದೆ.
ರಾಜ್ಯ ಸರಕಾರ ಕೂಡಲೇ ನಮ್ಮ ಸಮುದಾಯದ ಸ್ಥಿತಿ ಗತಿಗಳನ್ನು ಇನ್ನೊಮ್ಮೆ ಪರಿಶೀಲಿಸಿ ಹಾಗೂ 1ನೇ ಗುಂಪಿನಲ್ಲಿರಿಸಿ ನಮ್ಮ ಶೇ.6ರ ಮೀಸಲಾತಿ ಒದಗಿಸಬೇಕು. ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದ್ದಾರೆ.