ಡೋರ ಸಮುದಾಯಕ್ಕಾದ ಅನ್ಯಾಯ ಸರಿ ಪಡಿಸಲು ಆಗ್ರಹಿಸಿ ತಹಸೀಲ್ದಾರರಿಗೆ ಮನವಿ

ಆಲಮೇಲ:ಎ.8:ಒಳ ಮೀಸಲಾತಿ ವರ್ಗೀಕರಣದಲ್ಲಿ ಬಹು ಸಂಖ್ಯಾತ ಅಸ್ಪ್ರಶ್ಯ ಹಾಗೂ ಆರ್ಥಿಕವಾಗಿ ಹಿಂದುಳಿದ ಡೋಹರ ಕಕ್ಕಯ್ಯ ಸಮಾಜವನ್ನು ಅವೈಜ್ಞಾನಿಕವಾಗಿ 4ನೇ ಗುಂಪಿನಲ್ಲಿರಿಸಲಾಗಿದೆ,. ಇದು ಸಮುದಾಯಕ್ಕಾದ ದೊಡ್ಡ ಅನ್ಯಾಯ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ಕೋಂಡು ಡೋರ ಸಮುದಾಯವನ್ನು 1ನೇ ಗುಂಪಿನಲ್ಲಿರಿಸಿ ಡೋಹರ ಕಕ್ಕಯ್ಯ ಸಮುದಾಯಕ್ಕೆ ಶೇ% 6 ರಷ್ಟು ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿ ಡೋಹರ ಕಕ್ಕಯ್ಯ ಸಮಾಜದ ತಾಲೂಕಾ ಪದಾಧಿಕಾರಿಗಳಿಂದ ಗುರುವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಅಂಬೇಡ್ಕರ ವೃತ್ತದಿಂದ ಪಾದಯಾತ್ರೆಯ ಮೂಲಕ ಡೋಹರ ಕಕ್ಕಯ್ಯ ಸಮಾಜದ ತಾಲೂಕ ಪದಾಧಿಕಾರಿಗಳು ಶಾಂತ ರೀತಿಯಲ್ಲಿ ತಹಸೀಲ್ದಾರರ ಕಛೇರಿಗೆ ಆಗಮಿಸಿ ಡೋರ ಸಮುದಾಯವನ್ನು 1ನೇ ಗುಂಪಿನಲ್ಲಿರಿಸಿ ಡೋಹರ ಕಕ್ಕಯ್ಯ ಸಮುದಾಯಕ್ಕೆ ಶೇ% 6 ರಷ್ಟು ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿ ಸಿರಸ್ಥೇದಾರ ಪಿ.ಎಸ್.ಮೂಕಿಹಾಳರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಂತರ ತಾಲೂಕ ಅಧ್ಯಕ್ಷ ಅಮರ ನಾರಾಯಣಕರ ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಸ್ಪ್ರಶ್ಯವಾಗಿಯೇ ಉಳಿದುಕೊಂಡಿರುವ ಹಾಗೂ ಅತಿ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ದಲಿತ ಎಡಗೈ ಸಮುದಾಯಗಳಾದ ಚರ್ಮ ಸಂಬಂಧಿತ ಕಸುಬು ಮಾಡುವ ಮಾದಿಗ ಹಾಗೂ ಸಮಗಾರ ಜಾತಿಗಳೊಂದಿಗೆ ನಮ್ಮ ಜಾತಿಯೂ ಇದೆ. ಆದರೆ ಸದ್ಯ ರಾಜ್ಯ ಸರ್ಕಾರ ಡೋಹರ ಕಕ್ಕಯ್ಯ ಸಮಾಜವನ್ನು ಅವೈಜ್ಞಾನಿಕವಾಗಿ 4ನೇ ಗುಂಪಿನಲ್ಲಿ ಸೇರಿಸಿರುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವದು ಎಂದರು.
ಈ ಸಂದರ್ಭದಲ್ಲಿ ಡೋರ ಕಕಯ್ಯಾ ಸಮಾಜದ ಮುಖಂಡರಾದ ಸುನೀಲ ನಾರಾಯಣಕರ, ದಯಾನಂದ ನಾರಾಯಣಕರ, ಸುಭಾಸ ನಾರಾಯಣಕರ,ರಾಹುಲ ಹೊಟಕರ, ಸಿದ್ಧರಾಮ ನಾರಾಯಣಕರ,ವಿಲಾಸ ನಾರಾಯಣಕರ,ಮಂಜುನಾಥ ನಾರಾಯಣಕರ, ಜಗದೀಶ ಸೋನಮನೆ,ವಿಜಯ ನಾರಾಯಣಕರ, ವಿಲಾಸ ನಾರಾಯಣಕರ,ಗಾಲೀಬ ನಾರಾಯಣಕರ ಸತೀಶ ನಾರಾಯಣಕರ,ಸಂತೋಷ ನಾರಾಯಣಕರ ಸುಮೀತ ನಾರಾಯಣಕರ ಹಾಗೂ ಇತ್ತರರು ಇದ್ದರು.