ಡೋರ್ ಇಲ್ಲದ ಬಾಗಿಲಿನಲ್ಲಿ ವಿದ್ಯಾರ್ಥಿಗಳು ಪ್ರಯಾಣ

ರಾಯಚೂರು, ಜೂ.೨೬- ಮುರಿದ ಬಾಗಿಲಿನಲ್ಲಿ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಪ್ರಯಾಣ ಮಾಡುವ ದುಸ್ಥಿತಿ ಎದುರಾಗಿದೆ.
ಗ್ರಾಮಾಂತರ ಸಾರಿಗೆಗಳು ಸಕಾಲದಲ್ಲಿ ಶಾಲಾ- ಕಾಲೇಜುಗಳ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಲು ವಿಫಲವಾಗಿವೆ. ಬರುವ ಒಂದೇ ಬಸ್ಸಿನಲ್ಲಿ ಇತರೆ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳನ್ನು ಸಂಚರಿಸುತ್ತಿದ್ದಾರೆ.
ರಾಯಚೂರು ತಾಲೂಕಿನ ಕೊರ್ತಕುಂದ ಗ್ರಾಮದ ಮಾರ್ಗವಾಗಿ ತೆರಳುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಹೆಣ್ಣು ಮಕ್ಕಳು ತೆರೆದ ಬಸ್ ಡೋರ್‌ನಲ್ಲೇ ನಿಂತು ಪ್ರಯಾಣ ಮಾಡಬೇಕಾದ ಸ್ಥಿತಿ ದುಸ್ಥಿತಿ ಇದೆ.
ಇತರೆ ಗಡಿಭಾಗಗಳಿಗೆ ಇಂದಿಗೂ ಸಮರ್ಪಕ ಬಸ್ ಸಂಚಾರ ಕಲ್ಪಿಸಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೆಪಕ್ಕೆ ಮಾತ್ರ ಸರ್ಕಾರಿ ಬಸ್ ಪಾಸ್ ವಿತರಣೆ ಮಾಡಲಾಗಿದೆ. ಆದರೆ, ಪಾಸ್ ವಿತರಣೆ ಮಾಡಿರುವ ಮಾರ್ಗಗಳಿಗೆ ಇಂದಿಗೂ ಬಸ್ ಸೌಕರ್ಯ ಕಲ್ಪಿಸದಿರುವುದೇ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗಡಿ ಭಾಗಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸಂಚಾರವಿಲ್ಲದ ಕಾರಣ ಬಸ್‌ಗಾಗಿ ಗಂಟೆಗಂಟಲೇ ತಾಲ್ಲೂಕಿನ ಕಾಯಬೇಕು. ಬಸ್ ಬಂದ ನಂತರ ಇತರೆ ಪ್ರಯಾಣಿಕರು, ವಿದ್ಯಾರ್ಥಿಗಳು ಒಂದೇ ಬಸ್ಸಿನಲ್ಲಿ ವಿಧಿಯಿಲ್ಲದೆ ಸಂಚರಿಸಬೇಕು. ಅಂತಹ ದಯನೀಯ ರಾಯಚೂರು ತಾಲ್ಲೂಕಿನ ಕೊರ್ತಕುಂದ ಶಾಲಾ ವಿದ್ಯಾರ್ಥಿಗಳ ಪರಿಸ್ಥಿತಿಯಾಗಿದೆ.