ಡೋನೆಷನ್ ಹಾವಳಿ ತಡೆಗಟ್ಟುವಂತೆ  ಎಸ್.ಎಫ್.ಐ ಪತ್ರಿಭಟನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.26: ಖಾಸಗಿ ಶಾಲೆಯಲ್ಲಿ ಡೋನೆಷನ್ ಹಾವಳಿ, ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ, ಸರಕಾರದ ನಿಯಮಗಳನ್ನು ಗಾಳಿಗೆ ತೂರಿದ ಖಾಸಗಿ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ  ನಗರದ ಬಿಇಓ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ತಾಲೂಕಾ ಅಧ್ಯಕ್ಷ ಗ್ಯಾನೇಶ ಕಡಗದ ಮಾತನಾಡಿ, ಖಾಸಗಿ ಶಾಲೆಯಲ್ಲಿ ಶೂ, ಬಟ್ಟೆ, ಪುಸ್ತಕ ಸೇರಿದಂತೆ ಇತರೆ ಶುಲ್ಕ ಹೆಚ್ಚಿನ ಪ್ರಮಾಣದಲ್ಲಿ ಪಡೆಯುತ್ತಿದ್ದಾರೆ. ಮೀತಿ ಮೀರಿ ಡೋನೆಷನ್ ವಸೂಲಿ ಮಾಡುತ್ತಿದ್ದಾರೆ. ಸರಕಾರದ ನಿಯಮಗಳ ಪ್ರಕಾರ ಶಾಲೆ ಶುಲ್ಕ ಬೋರ್ಡ್ ಅಳವಡಿಸಬೇಕು ಆದರೆ ಯಾರೂ ಪಾಲನೆ ಮಾಡುತ್ತಿಲ್ಲ.ಇದರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಹನುಮಂತ, ಸೋಮನಾಥ, ಶರೀಫ್, ಬಾಲಾಜಿ, ಮೌನೇಶ, ಶರೀಫ್, ರುದ್ರಗೌಡ, ಶಿವುಕುಮಾರ ಸೇರಿದಂತೆ ಅನೇಕರು ಇದ್ದರು.

One attachment • Scanned by Gmail