ಡೋಣಿ ನದಿ ದಡದಲ್ಲಿ ಸಿಲುಕಿದ್ದ ಇದ್ಲಿಬಟ್ಟಿ ತಯಾರಿಕೆ ಕುಟುಂಬದ ರಕ್ಷಣೆ

ತಾಳಿಕೋಟೆ:ಆ.6: ಡೋಣಿ ನಧಿಯಲ್ಲಿ ಪ್ರವಾಹವು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಡೋಣಿ ನಧಿಯ ದಡದಲ್ಲಿ ಸಿಲುಕಿದ್ದ ಇದ್ಲಿಬಟ್ಟಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ ಕುಟುಂಭವನ್ನು ತಾಲೂಕಾ ತಹಶಿಲ್ದಾರ ಶ್ರೀಧರ ಗೋಟ್ಟೂರ ನೇತೃತ್ವದಲ್ಲಿಯ ತಂಡ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದ ಡೋಣಿ ನಧಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ ಅಲ್ಲದೇ ಡೋಣಿ ನಧಿಯಲ್ಲಿದ್ದ ಶ್ರೀ ಹನುಮಾನ ಮಂದಿರಕ್ಕೆ ಜಲದಿಗ್ಭಂದನ ಉಂಟಾಗಿದ್ದು ನಧಿಯಲ್ಲಿ ನೀರಿನ ಮಟ್ಟ ಏರುತ್ತಿದ್ದಂತೆ ಅಕ್ಕ ಪಕ್ಕದ ಜಮೀನುಗಳಿಗೂ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಯು ನೀರಿನಲ್ಲಿ ಕೊಚ್ಚಿ ಹೋಗಿದೆ.

ಈ ಹಿಂದೆ ಕಳೆದ ವರ್ಷವು ಡೋಣಿ ನಧಿಯ ದಡದಲ್ಲಿ ಇದ್ಲಿಬಟ್ಟೆ ತಯಾರಿಕೆಯಲ್ಲಿ ತೊಡಗಿದ್ದ ಕುಟುಂಭವು ಪ್ರವಾಹದ ನಡುವೆ ಸಿಲುಕಿ ಬಹಳಷ್ಟು ಸಂಕಷ್ಟ ಅನುಭವಿಸಿತ್ತಲ್ಲದೇ ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಅಧಿಕಾರಿಗಳು ಅವರ ರಕ್ಷಣೆಗೆ ಅನೇಕ ರೀತಿಯ ಪ್ರಯತ್ನಗಳನ್ನು ನಡೆಸಿ ಯಶಸ್ವಿ ಕಾರ್ಯಚರಣೆ ಮಾಡಿತ್ತು.

ಈ ಭಾರಿಯೂ ಕೂಡಾ ಹಾಗೆ ಆಗದಿರಲಿ ಎಂದು ತಾಲೂಕಾಡಳಿತ ಅವರ ರಕ್ಷಣೆಗೆ ಮುಂದಾದಾಗ ಅರ ಸುತ್ತಲೂ ಪ್ರವಾಹದ ನೀರು ಆವರಿಸುತ್ತಾ ಸಾಗಿತ್ತು ಇದನ್ನು ಕಂಡು ಅವಸರದಲ್ಲಿಯೇ ಆ ಕುಟುಂಭವನ್ನು ರಕ್ಷೀಸಿದ್ದಾರೆ.

ಈ ರಕ್ಷಣಾ ಕಾರ್ಯದಲ್ಲಿ ಗ್ರಾಮ ಲೆಕ್ಕಾಧಿಕಾರಿ ಎಂ.ಕೆ.ಬಿರಾದಾರ, ಎಸ್.ಎಸ್.ಅಂಗಡಿ, ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಯವರು ಪಾಲ್ಗೊಂಡಿದ್ದರು.