ಡೋಣಿ ನದಿಯಲ್ಲಿ ಉಕ್ಕಿ ಬಂದ ಪ್ರವಾಹ ; ಸಂಚಾರ ಸ್ಥಗಿತ

ತಾಳಿಕೋಟೆ:ಜು.31: ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿನ್ನೇ ಸುರಿದ ಭಾರಿ ರಬಸದ ಮಳೆಗೆ ಡೋಣಿ ನಧಿಯು ಉಕ್ಕಿ ಹರಿಯುತ್ತಿದ್ದು ವಿಜಯಪೂರ ರಸ್ತೆಯ ಕೆಳಮಟ್ಟದ ಸೇತುವೆ ಹಾಗೂ ಹಡಗಿನಾಳ ಮಾರ್ಗದ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.

ತಾಳಿಕೋಟೆಯಿಂದ ರಾಜ್ಯ ಹೆದ್ದಾರಿಯ ಮೂಲಕ ವಿಜಯಪೂರಕ್ಕೆ ತೆರಳುವ ಡೋಣಿ ನಧಿಗೆ ಅಡ್ಡಲಾಗಿ ಕಟ್ಟಲಾಗಿರುವ ಮೇಲ್ಮಟ್ಟದ ಸೇತುವೆಯಲ್ಲಿ 6 ತಿಂಗಳ ಹಿಂದೆಯೇ ಕುಸಿತ ಕಂಡಿದ್ದರಿಂದ ಮೇಲ್ಮಟ್ಟದ ಸೇತುವೆಯ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿತ್ತು ಸದರಿ ಸಂಚಾರ ಮಾರ್ಗವನ್ನು ಪಕ್ಕದಲ್ಲಿಯ ಕೆಳಮಟ್ಟದ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ನಿನ್ನೇ ಸುರಿದ ಮಳೆಗೆ ಡೋಣಿ ನಧಿಯಲ್ಲಿ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವದರಿಂದ ಕೆಳಮಟ್ಟದ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ ಇದರಿಂದ ಮೇಲ್ಮಟ್ಟದ ಕುಸಿತಕಂಡ ಸೇತುವೆಯ ಮೇಲೆ ಬೈಕ್ ಸಂಚಾರಕ್ಕೆ ಜನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.

ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಕೆಳಮಟ್ಟದ ಸೇತುವೆಯ ಮೇಲೆ ಸಣ್ಣ ಪ್ರಮಾಣದ ನೀರು ಹರಿಯುತ್ತಿತ್ತು ಆದರೆ ಸದರಿ ಸೇತುವೆಗೆ ನಧಿಯ ನೀರಿನ ರಬಸಕ್ಕೆ ಹರಿದು ಬಂದ ಮುಳ್ಳುಕಂಠಿಗಳು ಸೇಕರಣೆಯಾಗಿ ನಿಂತುಕೊಂಡಿದ್ದವು ಇದನ್ನು ತೆರವುಗೊಳಿಸಲು ಜೆಸಿಬಿ ಯಂತ್ರದ ಬಳೆಸಲಾಗಿತ್ತು ಆ ಸಮಯದಲ್ಲಿ ನೀರಿನ ಪ್ರವಾಹವು ಏರುತ್ತಾ ಸಾಗಿದ್ದರಿಂದ ಜೆಸಿಬಿ ಯಂತ್ರದ ಚಾಲಕ ಸೇತುವೆ ಮೇಲೆ ನೀರು ಹೆಚ್ಚಾಗುತ್ತಿರುವದನ್ನು ಕಂಡು ನಧಿತೀರದಿಂದ ಹೊರಗಡೆ ಬಂದ ಪ್ರಸಂಗವೂ ಕೂಡಾ ನಡೆಯಿತು.

ಬೆಳಿಗ್ಗೆ 8 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೂಗೂ ಡೋಣಿ ನಧಿಯ ನೀರಿನ ಮಟ್ಟ ಏರುತ್ತಿರುವದನ್ನು ಕಂಡ ಪೊಲೀಸ್ ಅಧಿಕಾರಿಗಳು ಹಡಗಿನಾಳ ಗ್ರಾಮದ ಮುಖಾಂತರ ತೆರಳುವ ಕೆಳಮಟ್ಟದ ಸೇತುವೆಯ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾದ ಮೇಲ್ಮಟ್ಟದ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಿಪಿಐ ಆನಂದ ವಾಘ್ಮೋಡೆ, ಪಿ.ಎಸ್.ಐ.ವಿನೋಧ ದೊಡಮನಿ ಅವರು ಸೇತುವೆಯ ನಿರ್ಮಾಣದ ಮೇಲ್ವಿಚಾರಕರೊಂದಿಗೆ ಚರ್ಚಿಸಿ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾರ್ಯ ಸಂಪೂರ್ಣ ಮುಗಿಯದಿದ್ದರೂ ಕೂಡಾ ಸೇತುವೆಯ ಎರಡು ಬದಿಗಳಲ್ಲಿ ಗರಸು ಮಣ್ಣುಗಳನ್ನು ಹಾಕಿಸಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ಮೇಲ್ಮಟ್ಟದ ಸೇತುವೆಯು ಮುದ್ದೇಬಿಹಾಳ ಮಾರ್ಗಕ್ಕೆ ತೆರಳಲು ಅನುಕೂಲವಾಗಿದ್ದರೂ ಕೂಡಾ ವಿಜಯಪೂರ ಮಾರ್ಗದ ಕಡೆಗೆ ತೆರಳು ಸುಮಾರು 15 ಕೀಲೋ ಮೀಟರ್ ಸುತ್ತುವರಿದು ತೆರಳುವ ಸಂದರ್ಬ ಬಂದೊದಗಿದ್ದು ಈ ಕಾರ್ಯದಿಂದ ವಾಹನ ಸವಾರರಿಗೆ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೇ ಈ ಸೇತುವೆಯ ಮೇಲೆ ಬೃಹತ್ ಗಾತ್ರದ ವಾಹನಗಳನ್ನು ಬಿಟ್ಟು ಬಸ್ ಸಂಚಾರಕ್ಕೆ ಮತ್ತು ಸಣ್ಣ ಪುಟ್ಟ ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.


ಅಧಿಕಾರಿಗಳ ಜಾಣ ಕುರುಡುತನ

ಡೋಣಿ ನಧಿಯಲ್ಲಿ ಭಾರಿ ಪ್ರಮಾಣದ ನೀರು ಹರಿದು ಬಂದು ಪ್ರವಾಹ ಸೃಷ್ಠಿಯಾಗಿ ಸೇತುವೆಗಳು ಮುಳಗಡೆಗೊಂಡು ಜನರು ಪರದಾಡುತ್ತಿದ್ದರೂ ಕೂಡಾ ತಾಲೂಕಾಡಳಿತದ ಯಾವೋಬ್ಬ ಅಧಿಕಾರಿಗಳು ಸಹ ಬರದೇ ಜಾಣ ಕುರುಡುತನ ಪ್ರದರ್ಶನ ಮಾಡಿರುವದು ಎದ್ದು ಕಾಣುತ್ತಿತ್ತು.

ವಿಪತ್ತು ನಿರ್ವಹಣೆಯಲ್ಲಿ ತಾಲೂಕಾಡಳಿತ ಜಿಲ್ಲಾಡಳಿತದೊಂದಿಗೆ ಮಾಹಿತಿ ಹಂಚಿಕೊಂಡು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕಾಗಿರುವದು ಆದ್ಯ ಕರ್ತವ್ಯವಾಗಿದ್ದರೂ ಕೂಡಾ ಪ್ರವಾಹ ಉಂಟಾಗಿ ಮುಖ್ಯ ಹೆದ್ದಾರಿ ರಸ್ತೆಯ ಸಂಪರ್ಕ ಕಡಿತಗೊಂಡರೂ ಕೂಡಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ಹೊರತು ಪಡಿಸಿ ತಾಲೂಕಾಡಳಿತದ ಬೇರೆ ಯಾವ ಅಧಿಕಾರಿಗಳು ಸುಳಿಯದೇ ಬೇಜವಾಬ್ದಾರಿತನವನ್ನು ಪ್ರದರ್ಶನ ಮಾಡಿರುವದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಪತ್ತು ನಿರ್ವಹಣೆಯಲ್ಲಿ ಮುಂದಾಳತ್ವ ವಹಿಸಬೇಕಾದ ಅಧಿಕಾರಿಗಳೇ ಎಲ್ಲಾ ಗೊತ್ತಿದ್ದರೂ ಗೊತ್ತಿಲ್ಲದಂತೆ ಮತ್ತು ತಮಗೆ ಸಂಬಂದವಿಲ್ಲವೆಂಬವಂತೆ ಜಾಣ ಕುರುಡುತನ ಪ್ರದರ್ಶ ಮಾಡಿರುವದು ಏಷ್ಟು ಸರಿ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನೀಸಿದ್ದಾರೆ.