ಡೊಳ್ಳು ಬಾರಿಸಿ ಗಮನ ಸೆಳೆದ ಜೋಶಿ

ಧಾರವಾಡ,ಸೆ18: ವಿಶ್ವಕರ್ಮ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಧಾರವಾಡ ಹೊಸ ಯಲ್ಲಾಪುರದ ಕಸಬಾ ಗೌಡರ ಓಣಿಯ ಮೌನೇಶ್ವರ ದೇವಾಲಯದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದರು. ಸಕಲ ವಾದ್ಯ ಮೇಳದ ಜೊತೆ ಸಾಗಿದ ಮೆರವಣಿಗೆ ಧಾರವಾಡ ನಗರದಾದ್ಯಂತ ಸಂಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ವಸಂತ ಅರ್ಕಾಚಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.