
ಭಾಲ್ಕಿ:ಮೇ.12:ಪ್ರಸಕ್ತ ಸಾಲಿನ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು ಭಾಲ್ಕಿ ನಗರದ ಪ್ರತಿಷ್ಠಿತ ಡೈಮಂಡ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರಾವಿ ರವಿ ಕಲಶೆಟ್ಟಿ 618/625 (98.88%) ಅಂಕ ಪಡೆದು ರಾಜ್ಯಕ್ಕೆ 8ನೇ ರ್ಯಾಂಕ್, ರಿತುಲ ಧನಾಜಿ 617/625 (98.72%) 9ನೇ ರ್ಯಾಂಕ್ ಮತ್ತು ರಾಜಲಕ್ಷ್ಮಿ ಹನುಮಂತ 616/625 (98.56%) 10ನೇ ರ್ಯಾಂಕ್ ಪಡೆಯುವುದರ ಮೂಲಕ ಭಾಲ್ಕಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ.
ವೈ.ಸೂರಜ ಮಾಧವರಾವ 97.76, ಪ್ರಗತಿ ಪ್ರಶಾಂತ ಖಂಡ್ರೆ, ಶ್ರದ್ಧಾ ವಿಶ್ವನಾಥ ಮತ್ತು ಕಿರಣ ಸಂತೋಷ 97.60, ಶ್ರೀನಿವಾಸ ವಸಂತ ಪವಾರ 96.64, ಸಾಯಿಕುಮಾರ ಸುನಿಲಕುಮಾರ 96.16, ಪೃಥ್ವಿ ಪಂಢರಿ 95.36, ಅಜಯಕುಮಾರ ಶಿವಕುಮಾರ, ಹರ್ಷ ಮಲ್ಲಿಕಾರ್ಜುನ ಮತ್ತು ಪಾಯಲ ವಿಜಯಕುಮಾರ 95.20, ನಂದಿನಿ ಸಂಜೀವಕುಮಾರ 94.72, ಅಭಿಷೇಕ ಸಂತೋಷ 94.56, ಸಿದ್ರಾ ಫಾತಿಮಾ ರಫಿಕೋದ್ದೀನ್ 94.40, ಮಹಾದೇವಿ ಕಾಂತಯ್ಯ 94.24, ಪ್ರಗತಿ ಪ್ರಮೋದ ಗಿರಿ, ಪೃಥ್ವಿರಾಜ ರಮೇಶ ಮತ್ತು ಸ್ಫೂರ್ತಿ ನಂದಕುಮಾರ 94.08, ಹುಜ್ಮಾ ನಯುಮ್, ಪ್ರತೀಕ್ಷಾ ಬಾಬುರಾವ ಮತ್ತು ಶೇಖ್ ರೆಹಾನ್ ಮುಜೀಮ 93.92, ದೀಪಾಲಿ ಸುಜೀತ 93.76, ಶ್ವೇತಾರಾಣಿ ಸಂಜೀವಕುಮಾರ 92.64, ಪ್ರೇರಣಾ ಸುನೀಲಕುಮಾರ ಮತ್ತು ರೋಹಿತ ಉತ್ತಮ ಪುರಿ 92.48, ಅಬುರೆಹಮಾನ್‍ಸಫ್ತೇನ್ ಇಬ್ರಾಹಿಂ, ವಿಜಯಶ್ರೀ ಸಂಗಮೇಶ 92.32, ಬರದಾಪುರೆ ಸುಜಲ ಅಶೋಕ 92.16, ಶೇಖ್ ಇಮ್ರಾನ್ ಶೇಖ್ ಮಕ್ತುಮ್ 91.84, ರೋಹಿತ್ ರಾಮ 91.52, ಆದಿತ್ಯ ಶಿವಕುಮಾರ 91.04, ಅಂಬಿಕಾ ವಿಜಯಕುಮಾರ, ಕಿರಣ ರಮೇಶ ಮತ್ತು ಪ್ರೇಮ ಅಂಕುಶ 90.88, ಐಶ್ವರ್ಯ ವೆಂಕಟರಾವ ಮತ್ತು ಜೊಯಾನ್ ಮುಜೀಬ 90.40, ಆದಿತ್ಯ ಬಾಲಾಜಿ ಮತ್ತು ಆದಿತ್ಯ ಲಕ್ಷ್ಮಣ 89.92, ಅರ್ಪಿತಾ ರಾಜಕುಮಾರ 89.76, ಆದಿತ್ಯ ಅರ್ಜುನರಾವ 89.28, ಆದಿತ್ಯ ಪ್ರಕಾಶ ಶೆಡೊಲೆ 89.12, ರಶ್ಮಿ ರಮೇಶ 88.96, ನೇಹಾ ಅಂಬಾದಾಸ 88.80, ಅಂಬಾದಾಸ ಮಲ್ಲಿಕಾರ್ಜುನ ಮತ್ತು ಭಾಗ್ಯಶ್ರೀ ರಾಜಕುಮಾರ 88.64, ಜ್ಞಾನದೇವ ಮಾರುತಿರಾವ, ಮಾಹೀನ್ ಅಂಜುಮ್ ಅಬ್ದುಲ್ ವಾಹೇದ್, ಪೃಥ್ವಿರಾಜ ವೀರಶೆಟ್ಟಿ ಮತ್ತು ಸೂರಜ ಸುಧಾಕರ 87.68, ವೈಶಾಲಿ ಪೀರಾಜಿ 87.52, ಸಾಕ್ಷಿ ಚಂದ್ರಕಾಂತ 87.20, ಪ್ರತೀಕ ಕಾಶಿನಾಥ 87.04, ಶಿವಶಂಕರ ರಾಮಶೆಟ್ಟಿ 86.88, ಅಮಿತ ಜ್ಞಾನೇಶ್ವರ 86.40, ವೈಷ್ಣವಿ ಶಿವಕುಮಾರ 86.24, ಚೇತನ ರಾಜಕುಮಾರ 86.08, ಪ್ರಿಯಾ ಮಾಧವರಾವ 85.92, ಮಹಾಲಕ್ಷ್ಮಿ ಚಂದ್ರಕಾಂತ ಮತ್ತು ರುದ್ರಾಲಿ ಅಶೋಕ 85.76, ಸಾಕ್ಷಿ ದಯಾನಂದ ಮತ್ತು ಓಂಕಾರ ಪಂಡಿತ 84.96, ಪ್ರತೀಕ್ಷಾ ತುಕಾರಾಮ ಮತ್ತು ಚೇತನ ಅರ್ಜುನರಾವ 84.64, ಶೇಖ್ ಸಲ್ಮಾ ಸುಲ್ತಾನಾ 84.16, ಅನಿಕೇತ ಚಂದ್ರಕಾಂತ 84.00 ಪ್ರತಿಶತ ಅಂಕ ಪಡೆದಿರುತ್ತಾರೆ.
ಒಟ್ಟು 251 ವಿದ್ಯಾರ್ಥಿಗಳು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದು 15 ವಿದ್ಯಾರ್ಥಿಗಳು 95 ಪ್ರತಿಶತ, 38 ವಿದ್ಯಾರ್ಥಿಗಳು 90 ಪ್ರತಿಶತಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದಿರುತ್ತಾರೆ. ಅಗ್ರಶ್ರೇಣಿಯಲ್ಲಿ 99 ವಿದ್ಯಾರ್ಥಿಗಳು ಹಾಗೂ ವಿಷಯಗಳವಾರು 31 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
“ವಿದ್ಯಾರ್ಥಿಗಳ ಜೀವನದಲ್ಲಿ ಹತ್ತನೇ ತರಗತಿ ಶಿಕ್ಷಣ ಅತ್ಯಂತ ಮಹತ್ವದ ಘಟ್ಟ”. ಈ ಹಂತದಲ್ಲಿ ಅವರು ಪಡುವ ಪರಿಶ್ರಮ ಮತ್ತು ತೆಗೆದುಕೊಳ್ಳುವ ನಿರ್ಧಾರ ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಬುನಾದಿಯನ್ನು ನೀಡುತ್ತದೆ ಮತ್ತು ಬೌದ್ಧಿಕ ಬೆಳವಣಿಗೆಗೆ ಅವಕಾಶಗಳನ್ನು ತೆರೆದಿಡುವ ಮೂಲಕ ಅವರ ಸರ್ವಾಂಗೀಣ ವಿಕಾಸಕ್ಕೆ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಇದರ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ವೈ. ಮಾಧವರಾವ ವಿದ್ಯಾರ್ಥಿಗಳಿಗೆ ಹಿತನುಡಿಯನ್ನು ತಿಳಿಸುತ್ತ ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿರುತ್ತಾರೆ.
ಈ ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಮಸ್ತಾನವಲಿ ಮಾತನಾಡಿ “ವಿದ್ಯಾರ್ಥಿಯ ಆತ್ಮವಿಶ್ವಾಸ ಮತ್ತು ನಿರಂತರವಾದ ಅಭ್ಯಾಸದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಇದೇ ರೀತಿ ಪ್ರತಿಯೊಬ್ಬ ವಿದ್ಯಾರ್ಥಿಯು ಅತ್ಯುತ್ತಮ ಸಾಧನೆ ಮಾಡಬೇಕು” ಎಂದು ತಿಳಿಸಿದರು.
ಶಾಲೆಯ ಟ್ರಸ್ಟ್‍ನ ಅಧ್ಯಕ್ಷ ಶ್ರೀಮತಿ ವೈ.ರಜನಿ ಮಾಧವರಾವ ಮತ್ತು ಕಾರ್ಯದರ್ಶಿ ಶ್ರೀಮತಿ ಶೇಖ್ ಗೌಸಿಯಾ ಹಾಗೂ ಶಾಲೆಯ ಮುಖ್ಯಗುರುಗಳಾದ ಶ್ರೀ ಧನರಾಜ ನೀಲಂಗೆ, ಆಡಳಿತಾಧಿಕಾರಿಗಳಾದ ಶ್ರೀ ಬಸವರಾಜ ಪಾಟೀಲ, ಶ್ರೀ ರಾಮ ಕನಸೆ ಮತ್ತು ಶ್ರೀಮತಿ ಸ್ವಪ್ನಾಲಿ ಕಾಶೆಂಪುರೆ ಅವರು ಕೂಡಾ ವಿದ್ಯಾರ್ಥಿಗಳ ಅಮೋಘ ಸಾಧನೆಗೆ ವಿದ್ಯಾರ್ಥಿಗಳಿಗೂ ಹಾಗು ಪಾಲಕ ವೃಂದದವರಿಗೂ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ಶಾಲೆಯ ಎಲ್ಲಾ ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಸಾಧನೆಗೈದ ವಿದ್ಯಾರ್ಥಿ ಮತ್ತು ಪಾಲಕರಿಗೆ ಸನ್ಮಾನಿಸಿದರು.