
ಭಾಲ್ಕಿ:ಎ.22:ಡೈಮಂಡ್ ಗ್ರುಪ್ ಆಫ್ ಇನ್ಸ್ಟಿಟ್ಯುಶನ್‍ನ 2022-23ನೇ ಸಾಲಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಡೈಮಂಡ್ ಕಾಲೇಜು ರಾಜ್ಯಕ್ಕೆ 8ನೇ ಸ್ಥಾನ, ಕಲಬುರ್ಗಿ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಬೀದರ ಜಿಲ್ಲೆಗೆ ನಮ್ಮ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಸ್ಥಾನವನ್ನು ಪಡೆದು ಅಗ್ರಗಣ್ಯರೆನಿಸಿದ್ದಾರೆ.
ಭಾಲ್ಕಿ ತಾಲೂಕಿನ ಹಲವಾರು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿದ್ದು ಕನ್ನಡ, ಮರಾಠಿ, ಉರ್ದು ಮತ್ತು ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರೂ ಕೂಡ ಅತ್ಯುತ್ತಮ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ ಹಾಗೂ ಭಾಲ್ಕಿ ತಾಲೂಕಿನ ಹೆಸರು ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
- ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ವಿವರ ಕೆಳಗಿನಂತಿದೆ :-
ಶುಭಾಂಗಿ ಭರತರಾವ ಬಿರಾದಾರ 98.17% ಪಡೆದು ಮತ್ತು ಮೂರು ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.
ಸಾನಿಯಾ ಸತ್ತಾರಮಿಯಾ 97.00,
ಪ್ರಜ್ಞಾ ಶಾಮರಾವ, ಅಮರ ಶಿವರಾಜ ಮತ್ತು ಶ್ರೀಕಾಂತ ಮಾರುತಿ 96.33.,
ಸ್ನೇಹಾ ಮಾರುತಿರಾವ 95.67,
ರಕ್ಷಿತಾ ಸಂಗಮೇಶ್ವರ ಮತ್ತು ನಾಗೇಶ ರಾಜಕುಮಾರ 95.66,
ಶ್ವೇತಾ ಶ್ರೀಪತಿ ಮತ್ತು ಸಾಯಿನಾಥ ಅಶೋಕಕುಮಾರ 95.33,
ನಾಗೇಶ ಮಲ್ಲಿಕಾರ್ಜುನ, ಆದಿತ್ಯ ಭರತ, ಶೇಖ್‍ಫಿರೋಜ್ ಶೇಖ್‍ತಾಜೋದ್ದೀನ್
ಮತ್ತು ಸೃಷ್ಟಿ ನಂದಕುಮಾರ 95.17,
ಸ್ವಾತಿ ಮಾರುತಿ ಮತ್ತು ಓಂಕಾರ ನಾಗಶೆಟ್ಟಿ 95.00,
ವಿಶೇಷವಾಗಿ ಹರಿಓಂ Pಅಒ 100%, Pಅಒಃ 99.25% ವಿದ್ಯಾರ್ಥಿಯು ಅತ್ಯುತ್ತಮ ಅಂಕಗಳನ್ನು ಪಡೆದಿರುತ್ತಾನೆ.
ಒಟ್ಟು ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು 95%, 179 ವಿದ್ಯಾರ್ಥಿಗಳು 90%, ಡಿಸ್ಟಿಂಕ್ಷನ್‍ನಲ್ಲಿ 389 ವಿದ್ಯಾರ್ಥಿಗಳು ಬಂದಿದ್ದಾರೆ. 100ಕ್ಕೆ 100ನ್ನು ಭೌತಶಾಸ್ತ್ರ 18, ರಸಾಯನಶಾಸ್ತ್ರ 05, ಗಣಿತದಲ್ಲಿ 15, ಜೀವಶಾಸ್ತ್ರ 04 ಮತ್ತು ಕಂಪ್ಯೂಟರ್ ಸೈನ್ಸ್‍ದಲ್ಲಿ 07 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದಿರುತ್ತಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಮಸ್ತಾನವಲಿ, ಕಾರ್ಯದರ್ಶಿಗಳಾದ ವೈ.ಮಾಧವರಾವ, ಮುಖ್ಯ ಆಡಳಿತಾಧಿಕಾರಿ ಅಶ್ವಿನ ಭೋಸ್ಲೆ, ಪ್ರಾಂಶುಪಾಲರಾದ ಎಸ್‍ಕೆ.ಹುಸೇನ್, ಆಡಳಿತಾಧಿಕಾರಿಗಳಾದ ಗಿರೀಶ ಭಂಡಾರಿ, ಮಂಜುನಾಥ ನೀಲಂಗೆ, ಮಂಜುನಾಥ ಜೋಳದಾಪಕೆ, ಜ್ಞಾನೇಶ್ವರ ಬಿರಾದಾರ, ರೆಹಮಾನ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.