ಡೈಮಂಡ್ ದ್ವಿತೀಯ ಪಿ.ಯು.ಸಿ ಅದ್ಭುತ ಫಲಿತಾಂಶ

ಭಾಲ್ಕಿ:ಏ.11:ಡೈಮಂಡ್ ಗ್ರುಪ್ ಆಫ್ ಇನ್ಸ್ಟಿಟ್ಯುಶನ್‍ನ 2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆಗೈದು ರಾಜ್ಯಕ್ಕೆ 10ನೇ ಮತ್ತು 11ನೇ ರ್ಯಾಂಕ್ ಹಾಗೂ ಕಲಬುರ್ಗಿ ವಿಭಾಗದಲ್ಲಿಯೇ ಪ್ರಥಮ ಸ್ಥಾನದಲ್ಲಿ ಮತ್ತು ಬೀದರ ಜಿಲ್ಲೆಗೆ ಅಗ್ರಗಣ್ಯರೆನಿಸಿದ್ದಾರೆ.
ಭಾಲ್ಕಿ ತಾಲೂಕಿನ ಹಲವಾರು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿದ್ದು ಕನ್ನಡ, ಮರಾಠಿ, ಉರ್ದು ಮತ್ತು ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರೂ ಕೂಡ ಅತ್ಯುತ್ತಮ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ ಹಾಗೂ ಭಾಲ್ಕಿ ತಾಲೂಕಿನ ಹೆಸರು ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

  • ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ವಿವರ ಕೆಳಗಿನಂತಿದೆ :-
    ರುಚಿತಾ ಸಂಜುಕುಮಾರ ಅಳ್ಳೆ 98.17, ಲೋಕೇಶ.ಜಿ. 98%, ಅಭಿಷೇಕ ನರಸಿಂಗರಾವ 97.66, ವೆಂಕಟೇಶ ಮತ್ತು ಸೂರಜ್ ಶಿವಕುಮಾರ 97.50, ದೇವಿಕಾ ಚಂದ್ರಕಾಂತ 97.16, ಅಮರ್ ಸೂರ್ಯಕಾಂತ 97, ಸುಜಲ್ ಪರಮೇಶ್ವರ 96.83, ಅರ್ಜುನ ವಿದ್ಯಾಸಾಗರ ಮತ್ತು ದಿವ್ಯಶ್ರೀ ಶಿವಶಂಕರಯ್ಯಾ 96.83, ಸಂಕೇತ ಬಸವರಾಜ 96.66, ಅಂಜಲಿ ದತ್ತಾತ್ರೀ, ಅಕ್ಷತಾ ಅಯ್ಯಣ್ಣ 96.5, ಲಕ್ಷ್ಮಿ ನಂದಕುಮಾರ 96.17, ಅರ್ಜುನ ತ್ರಿಂಬಕ, ಪಾಪಕ್ಕಾ ತಾನಾಜಿ, ದರ್ಶನ ರಮೇಶ, ದರ್ಶನ ಮಾರುತಿ ಮತ್ತು ಸುಷ್ಮಾ ವಿಠ್ಠಲ 96, ಸ್ವಾತಿ ಶಿವಶಂಕರ ಸ್ವಾಮಿ 95.83, ಸುಮಿತ ಸೋಮಶೇಖರ, ಕೃಷ್ಣ ಸಂತೋಷ ಮತ್ತು ವೈಷ್ಣವಿ ವಿಜಯಕುಮಾರ 95.67, ಅನ್ನಪೂರ್ಣಾ ಗೋವಿಂದರಾವ, ಸ್ನೇಹಾ ದೇವೇಂದ್ರ, ಸಪ್ನಾಲಿ ಬಾಲಾಜಿ, ವೈಷ್ಣವಿ ಕಿಶನರಾವ, ಪ್ರೀತಿ ರತಿಕಾಂತ ಧರಣೆ 95.5, ಗಣೇಶ ಶಿವರಾಜ, ಶುಭಾಂಗಿ ದತ್ತಾತ್ರಿ, ವೀರೇಶ ಶಿವಕುಮಾರ, ರಾಮೇಶ್ವರ ಗಿರೀಶ, ವೈಷ್ಣವಿ ಮಹೇಶ 95.33, ಗೌರಿ ದಿಲಿಪ, ಬಸವಾಂಜಲಿ ಕಮಲಾಕರ ಮತ್ತು ಐಶ್ವರ್ಯ ಕಿಶನರಾವ 95.17, ಖುಷಿ ದತ್ತು 95, ಅತುಲ ಕಾಶಿನಾಥ, ವೈಷ್ಣವಿ ಗಣಪತಿ, ರಾಜದೀಪ ಸಂಜೀವಕುಮಾರ ಮತ್ತು ಮಮತಾ ದಿಗಂಬರ, ಗಿರಿಜಾ ಸೂರ್ಯಕಾಂತ, ಕೃಷ್ಣ ಬಾಲಾಜಿ ಪವಾರ, ಮಹಾನಂದಾ ಸಂಜುಕುಮಾರ, ಮಾಣಿಕ ಸಂಗಮನಾಥ, ಶರಣಬಸಪ್ಪ ಸಿದ್ಧಪ್ಪ, ಶ್ರೀಕಾಂತ ಹಣಮಂತ ರೆಡ್ಡಿ, ಶುಭಂ ವಿಕಾಸ ರೆಡ್ಡಿ, ಝಬೇರ್ ಮಿಯಾ ಮುಫೀಜ್ ಮಿಯಾ 94.83, ಅಭಿಜೀತ್ ಮಾಧವ, ಸಾಯಿಕಿರಣ ಸುರೇಶ, ಕಿರಣ ಶಿವರಾಜ ಮತ್ತು ಅಫಿಫಾ ರಮಜಾನಿ ಪಟೇಲ, ಪ್ರಮೋದಕುಮಾರ ಸಂಜುಕುಮಾರ, ಶರಣಮ್ಮಾ ದತ್ತಾತ್ರೇಯ 94.67, ಪ್ರಾರ್ಥನಾ ಅರ್ಜುನ, ಅಮ್ರಪಾಲಿ ಅನಿಲಕುಮಾರ, ಕಾವೇರಿ ಹಣಮಂತರಾಯ ಮತ್ತು ರಿತುಲ ಕಮಲಾಕರ 94.5 ಮುಂತಾದವರು.
    ಸಾಗರ ಯುವರಾಜ 96.50% ಪಡೆದು ಮತ್ತು ನಾಲ್ಕು ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.
    ಒಟ್ಟು ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು 95%, 346 ವಿದ್ಯಾರ್ಥಿಗಳು 90%, ಅಗ್ರಶ್ರೇಣಿ(ಡಿಸ್ಟಿಂಕ್ಷನ್)ಯಲ್ಲಿ 679 ವಿದ್ಯಾರ್ಥಿಗಳು ಬಂದಿದ್ದಾರೆ. 100ಕ್ಕೆ 100ನ್ನು ಭೌತಶಾಸ್ತ್ರ 04, ರಸಾಯನಶಾಸ್ತ್ರ 16, ಗಣಿತದಲ್ಲಿ 39, ಜೀವಶಾಸ್ತ್ರ 30, ಕಂಪ್ಯೂಟರ್ ಸೈನ್ಸ್‍ದಲ್ಲಿ 01 ಮತ್ತು ಕನ್ನಡ ವಿಷಯದಲ್ಲಿ 02 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದಿರುತ್ತಾರೆ.
    ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಮಸ್ತಾನವಲಿ, ಕಾರ್ಯದರ್ಶಿಗಳಾದ ವೈ.ಮಾಧವರಾವ, ಮುಖ್ಯ ಆಡಳಿತಾಧಿಕಾರಿ ಅಶ್ವಿನ ಭೋಸ್ಲೆ, ಆಡಳಿತಾಧಿಕಾರಿಗಳಾದ ಗಿರೀಶ ಭಂಡಾರಿ, ಮಂಜುನಾಥ ಜೋಳದಾಪಕೆ, ಜ್ಞಾನೇಶ್ವರ ಬಿರಾದಾರ, ರೆಹಮಾನ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.