`ಡೈಮಂಡ್ ಕ್ರಾಸ್’ ತೆರೆಗೆ ಬರಲು ಸಜ್ಜು

ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ “ಡೈಮಂಡ್ ಕ್ರಾಸ್” ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ರಾಮ್ ದೀಪ್ ನಿರ್ದೇಶನ ಮಾಡಿದ್ದಾರೆ.

ಈ ವೇಳೆ ಮಾತಿಗಿಳಿದ ನಿರ್ದೇಶಕ ರಾಮ್ ದೀಪ್, ಚಿತ್ರದ ಟೀಸರ್ ಮತ್ತು ತುಣುಕು ಬಿಡುಗಡೆ ಮಾಡಲಾಗಿದೆ. ಉದ್ಯಮಿ ಮನೀಶ್ ಹಾಗೂ ನಟ ಮಿತ್ರ ಮೂಲಕ  ಚಿತ್ರ ಬಿಡುಗಡೆಯಾಗುತ್ತಿದೆ. ಅನೇಕ ಗಣ್ಯರು ಆಗಮಿಸಿ ಚಿತ್ರಕ್ಕೆ ಶುಭಹಾರೈಸಿದ್ದಾರೆ. ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ ಎಂದರು

ನಟ ಮಿತ್ರ ಮಾತನಾಡಿ ಮನೀಶ್ ಅವರಿಗೆ ಸಿನಿಮಾ ನಿರ್ಮಾಣ ಮಾಡುವ ಆಸಕ್ತಿಯಿತ್ತು. ವಿತರಣೆ ಮಾಡುವ ಮೂಲಕ ಚಿತ್ರಮಂದಿರಗಳಿಗೆ ತರುವ ಪ್ರಯತ್ನ ಮಾಡಿ. ಆನಂತರ ಸಿನಿಮಾ ಮಾಡಿ ಎಂದು ಸಲಹೆ ನೀಡಿದೆ. ಅದಕ್ಕೆ ಮನೀಶ್ ಒಪ್ಪಿದರು. ಕೆಲವು ಸ್ನೇಹಿತರು ಇದಕ್ಕೆ ಜೊತೆಯಾದರು “ಡೈಮಂಡ್ ಕ್ರಾಸ್” ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದರು.

ಮನೀಶ್ ಮಾತನಾಡಿ  ರಿವರ್ಸ್ ಪ್ಲೇ ಮೂಲಕ ಕೆಲಸ ಶುರು ಮಾಡಿದ್ದೇವೆ. ಮೊದಲು ಒಳ್ಳೆಯ ಚಿತ್ರಗಳನ್ನು ವಿತರಣೆ ಮಾಡಿ, ಆನಂತರ ನಿರ್ಮಾಣ ಮಾಡುತ್ತೇನೆ.ಚಿತ್ರ ಚೆನ್ನಾಗಿದೆ. ನಿಮ್ಮೆಲ್ಲರ ಸಹಕಾರವಿರಲಿ ಎಂದರು. ಮುಖ್ಯಪಾತ್ರಗಳಲ್ಲಿ ನಟಿಸಿರುವ ನಟಿ ರೂಪಿಕಾ, ರಜತ್ ಅಣ್ಣಪ್ಪ, ಮನು ಕೆ.ಎಂ , ಛಾಯಾಗ್ರಹಣ – ಸಂಕಲನ ಮಾಡಿರುವ ಸಂತೋಷ್ ರಾಧಾಕೃಷ್ಣನ್, ಸಂಗೀತ ನಿರ್ದೇಶಕ ಲೇಖನ್ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಅನೀಶ್ ಚಿತ್ರದ ಕುರಿತು  ಮಾಹಿತಿ ಹಂಚಿಕೊಂಡರು.