ಡೈಮಂಡ್ ಕಾಲೇಜಿನ ಸುಮಾರು 375+ ಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಅರ್ಹತೆ

ಭಾಲ್ಕಿ:ಜೂ.17: ತಾಲೂಕಿನ ಡೈಮಂಡ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ, ಮರಾಠಿ, ಉರ್ದು ಮತ್ತು ಆಂಗ್ಲ ಮಾಧ್ಯಮದಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಕೂಡ 2022-23ನೇ ಸಾಲಿನ ‘ನೀಟ್ ಪರೀಕ್ಷೆ’ಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದು ರಾಜ್ಯಮಟ್ಟದ ಅರ್ಹತೆಯನ್ನು ಪಡೆದು ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.
‘ನೀಟ್ ಪರೀಕ್ಷೆ’ಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು: ಶೇಖ್ ಫಿರೋಜ್ ತಾಜೋದ್ದೀನ್ 572, ಸರ್ವೇಶ ಶಿವಕುಮಾರ 539,
ವಿಜಯಲಕ್ಷ್ಮಿ 512, ಪ್ರಕೃತಿ ಜ್ಞಾನೇಶ್ವರ 510, ಶಾದಾಬ್ ಇಸ್ಮಾಯಿಲ್ 505, ಪ್ರಸಾದ 503, ಆಫಿಫಾಅಂಜುಮ ರಿಯಾಜುದ್ದೀನ್ 500, ಪೃಥ್ವಿರಾಜ ಹಂಸರಾಜ 500,
ಹÀರಿಕೃಷ್ಣ ವಿಜಯಕುಮಾರ 493, ವಿಕಾಸಕುಮಾರ ಜೆ.ಕೆ. 487, ವೈಭವ ಮಾರುತಿ 485, ಅತೆಶಾಮ್ ರೆಹಮದ್ 478, ಕೈಫ್ ಸತ್ತರ್‍ಮಿಯಾ 462,
ಪವನ ಪ್ರಕಾಶ ಮತ್ತು ಸೃಷ್ಟಿ ನಂದಕುಮಾರ 460 ಇನ್ನು ಮುಂತಾದವರು
ಹಾಗೂ 400+ ಕ್ಕೂ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ 38 ಕ್ಕೆ ಏರಿಕೆ ಆಗಿದೆ.
ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಮಸ್ತಾನವಲಿ ಮಾತನಾಡಿ “ವಿದ್ಯಾರ್ಥಿಗಳು ಕಠಿಣ ಹಾಗೂ ನಿರಂತರವಾದ ಅಭ್ಯಾಸದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು” ಎಂದು ತಿಳಿಸಿ, ‘ನೀಟ್ ಪುನರಾವರ್ತಿತ ಬ್ಯಾಚ್’ (ಖeಠಿeಚಿಣeಡಿs bಚಿಣಛಿh) ಗಳನ್ನು ಆರಂಭಿಸಲಾಗಿದೆ. ಇದರ ಸದುಪಯೋಗಪಡಿಸಿಕೊಂಡು ತಮ್ಮ ಕನಸು ಸಾಕಾರ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ವೈ.ಮಾಧವರಾವ ಹಾಗೂ ಮುಖ್ಯ ಆಡಳಿತಾಧಿಕಾರಿಗಳಾದ ಅಶ್ವಿನ ಭೋಸ್ಲೆ ಮತ್ತು ಆಡಳಿತಾಧಿಕಾರಿಗಳಾದ ರೆಹಮಾನ್, ಗಿರೀಶ ಭಂಡಾರಿ, ಮಂಜುನಾಥ ಜೋಳದಾಪಕೆ ಮತ್ತು ಜ್ಞಾನೇಶ್ವರ ಬಿರಾದಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ಪಾಲಕರಿಗೆ ಸನ್ಮಾನಿಸಿದರು.


ಸಾಧಕರಿಗೆ ಸನ್ಮಾನ
ಎಂಜನಿಯರಿಂಗ್, ಪಶು ವೈದ್ಯಕೀಯ ಸೇರಿ ವಿವಿಧ ವಿಭಾಗಗಳಲ್ಲಿ ಉತ್ತಮ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿನಯ ರಾಮರಾವ 64, ಪ್ರಿಯಾಂಕಾ ಸಿದ್ದಣ್ಣ 90, ಸಂತೋಷ ಮಲ್ಲಿಕಾರ್ಜುನ 140, ಚೇತನ ಚಂದ್ರಕಾಂತ 206, ಶ್ವೇತಾ ಮಹೇಶ 212, ಪ್ರಿಯಾಂಕಾ ಸಿದ್ದಣ್ಣ ಎಂ., 460, ಪ್ರಕೃತಿ ಸಂಗಶೆಟ್ಟಿ 497, ವಿಶಾಲ ಬಸವರಾಜ 564, ಶ್ರುತಿ ವಿಷ್ಣುವರ್ಧನರೆಡ್ಡಿ 585, ಬಿರಾದಾರ ಶಿವಶಂಕರ 623, ಶಿವಕುಮಾರ ಗಂಗಶೆಟ್ಟಿ 703, ಆದಿತ್ಯಾ ತಾನಾಜಿ 797, ಸುಶೀಲಕುಮಾರ ಸುಭಾಷ 894, ಭರತರೆಡ್ಡಿ ಶಂಭುರೆಡ್ಡಿ 926, ಪ್ರಶಾಂತ ಅನಿಲಕುಮಾರ 949, ಪ್ರಜ್ವಲ್ ಭರತೇಶ 976 ಮತ್ತು ಸಿದ್ದಾಂತ ರವೀಂದ್ರ ಅವರನ್ನು ಶ್ರೀಗಳು ಸನ್ಮಾನಿಸಿ, ಆಶೀರ್ವದಿಸಿದರು.