ಡೈಮಂಡ್ ಕಾಲೇಜಿನ ಸುಮಾರು 370 ಕ್ಕೂ ಅಧಿಕ ವಿದ್ಯಾರ್ಥಿಗಳು ಓಇಇಖಿ ಪರೀಕ್ಷೆಯಲ್ಲಿ ಅರ್ಹತೆ

ಭಾಲ್ಕಿ :sಸೆ.9:ತಾಲೂಕಿನ ಡೈಮಂಡ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2021-22ನೇ ಸಾಲಿನ ‘ನೀಟ್ ಪರೀಕ್ಷೆ’ಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದು ರಾಜ್ಯಮಟ್ಟದ ಅರ್ಹತೆಯನ್ನು ಪಡೆದು ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.
‘ನೀಟ್ ಪರೀಕ್ಷೆ’ಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು: ಕೃಷ್ಣ ಪುಂಡಲಿಕ 600, ಅಪೂರ್ವ ರಾಮಚಂದ್ರ 540, ಸುಷ್ಮಾ ಪ್ರಹ್ಲಾದರಾವ 527, ಸಂಗಮೇಶ ರಾಮಶೆಟ್ಟಿ 525, ವೈಭವ ವಿಜಯಕುಮಾರ 519, ಮಂಜುನಾಥ ಬಿರಾದಾರ 505, ಕಮರಾನ್ ಮುಜಾಹಿದ್ 504, ನಿಕಿತಾ ಚಂದ್ರಕಾಂತ 503, ಸಾಯಿನಾಥ ಪಾಟೀಲ 500, ಉಜ್ಮಾ ಶೇಖ್‍ನಿಸಾರ್ ಅಹಮದ್ 490, ಸಾಬಿಯಾ ಮಕ್ಬುಲ್ 470, ನಿಕಿತಾ ಉಮಾಕಾಂತ 442, ಅಫೀಫಾ ರಿಯಾಜೋದ್ದೀನ್ 400 ಇನ್ನು ಮುಂತಾದವರು.
ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಮಸ್ತಾನವಲಿ ಮಾತನಾಡಿ “ವಿದ್ಯಾರ್ಥಿಗಳು ಕಠಿಣ ಹಾಗೂ ನಿರಂತರವಾದ ಅಭ್ಯಾಸದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿ, ‘ನೀಟ್ ಪುನರಾವರ್ತಿತ ಬ್ಯಾಚ್’ (ಖeಠಿeಚಿಣeಡಿs bಚಿಣಛಿh) ಗಳನ್ನು ಆರಂಭಿಸಲಾಗಿದೆ. ನೀಟ್‍ನಲ್ಲಿ 400ಕ್ಕಿಂತ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ನೀಟ್ ಕೋಚಿಂಗ್ ಉಚಿತವಾಗಿ ನೀಡಲಾಗುತ್ತದೆ. ಇದರ ಸದುಪಯೋಗಪಡಿಸಿಕೊಂಡು ತಮ್ಮ ಕನಸು ಸಾಕಾರ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ವೈ.ಮಾಧವರಾವ ಹಾಗೂ ಮುಖ್ಯ ಆಡಳಿತಾಧಿಕಾರಿಗಳಾದ ಅಶ್ವಿನ ಭೋಸ್ಲೆ ಮತ್ತು ಆಡಳಿತಾಧಿಕಾರಿಗಳಾದ ಗಿರೀಶ ಭಂಡಾರಿ, ಮಂಜುನಾಥ ಜೋಳದಾಪಕೆ, ಜ್ಞಾನೇಶ್ವರ ಬಿರಾದಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ಪಾಲಕರಿಗೆ ಸನ್ಮಾನಿಸಿದರು.