ಡೈಮಂಡ್ ಕಾಲೇಜಿನ ಸುಮಾರು 250 ಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಅರ್ಹತೆ

ಭಾಲ್ಕಿ :ನ.4:ತಾಲೂಕಿನ ಡೈಮಂಡ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2020-21ನೇ ಸಾಲಿನ ‘ನೀಟ್ ಪರೀಕ್ಷೆ’ಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದು ರಾಜ್ಯಮಟ್ಟದ ಅರ್ಹತೆಯನ್ನು ಪಡೆದು ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.

‘ನೀಟ್ ಪರೀಕ್ಷೆ’ಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು: ಕ್ರಾಂತಿಕುಮಾರ 631, ಶ್ವೇತಾ ಬಸವರಾಜ 541, ಸ್ನೇಹಾ ವಿಲಾಸ ಮೋರೆ 528, ಈರುಪಮಾ 520, ರಾಧಿಕಾ ಜ್ಞಾನೋಬಾ 517, ವೈಶಾಲಿ ರಾಜಕುಮಾರ 513, ಅಲಿಂಪಾಶಾ 500, ವಿಷ್ಣುಕಾಂತ 500, ವಿಜಯಲಕ್ಷ್ಮಿ ದಿಗಂಬರ 464, ಶಿವಾನಿ ಬಸವರಾಜ 464, ಶಾದುಲ್ 463, ಸೋಹಂ 443, ಆದಿತ್ಯ 440, ರೋಹಿತ 440, ಖೈರುನ್ನಿಸಾ ನವಾಜಮಿಯಾ 434, ಸ್ನೇಹಾ ಸಂಜುಕುಮಾರ 424, ಪ್ರಜ್ವಲ್ 424, ಕಮರಾನ್ ಶೇಕ್ ಮುಜಾಹಿದ್ 421, ವಿಷ್ಣು 420, ವೈಷ್ಣವಿ ಲದ್ದೆ ಮತ್ತು ವೈಷ್ಣವಿ 400, ಕೃಷ್ಣಾ, ಉದಯ ಮತ್ತು ಜ್ಯೋತಿ ಜೋಸೆಫ್ ಕರಕಾಳೆ ಇನ್ನು ಮುಂತಾದವರು.

ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಮಸ್ತಾನವಲಿ ಮಾತನಾಡಿ “ವಿದ್ಯಾರ್ಥಿಗಳು ಕಠಿಣ ಹಾಗೂ ನಿರಂತರವಾದ ಅಭ್ಯಾಸದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿ, ‘ನೀಟ್ ಪುನರಾವರ್ತಿತ ಬ್ಯಾಚ್’ (ಖeಠಿeಚಿಣeಡಿs bಚಿಣಛಿh) ಗಳನ್ನು ಆರಂಭಿಸಲಾಗಿದೆ. ನೀಟ್‍ನಲ್ಲಿ 400ಕ್ಕಿಂತ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ನೀಟ್ ಕೋಚಿಂಗ್ ಉಚಿತವಾಗಿ ನೀಡಲಾಗುತ್ತದೆ. ಇದರ ಸದುಪಯೋಗಪಡಿಸಿಕೊಂಡು ತಮ್ಮ ಕನಸು ಸಾಕಾರ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ವೈ.ಮಾಧವರಾವ ಹಾಗೂ ಮುಖ್ಯ ಆಡಳಿತಾಧಿಕಾರಿಗಳಾದ ಅಶ್ವಿನ ಭೋಸ್ಲೆ, ಗಿರೀಶ ಭಂಡಾರಿ, ಮಂಜುನಾಥ ಜೋಳದಾಪಕೆ, ಜ್ಞಾನೇಶ್ವರ ಬಿರಾದಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ಪಾಲಕರಿಗೆ ಸನ್ಮಾನಿಸಿದರು.