ಡೈಜೆಸ್ಟಿವ್ ಹೆಲ್ತ್ ಸಮಸ್ಯೆಗೆ ಉಚಿತ ಶಿಬಿರ

ಆನೇಕಲ್.ಮೇ.೩೧:ವಿಶ್ವ ಡೈಜೆಸ್ಟಿವ್ ಹೆಲ್ತ್ ಡೇ ಅಂಗವಾಗಿ ಆನೇಕಲ್ ಪಟ್ಟಣದಲ್ಲಿರುವ ಶ್ರೀರಾಮ ಕುಟೀರದ ಆವರಣದಲ್ಲಿ ಬೆಂಗಳೂರು ಗ್ಯಾಸ್ಟ್ರೋ ಸೆಂಟರ್ ವತಿಯಿಂದ ಗ್ಯಾಸ್ಟಿಕ್ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಸಂಬ೦ದಿಸಿದ ಡೈಜೆಸ್ಟಿವ್ ಹೆಲ್ತ್ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗಿತ್ತು.
ಇನ್ನು ಡೈಜೆಸ್ಟಿವ್ ಹೆಲ್ತ್ ಶಿಭಿರಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿರವರು ಚಾಲನೆ ನೀಡಿ ನಂತರ ಮಾತನಾಡಿದ ಅವರು ಬೆಂಗಳೂರು ಗ್ಯಾಸ್ಟ್ರೋ ಸೆಂಟರ್ ನ ನಿರ್ದೇಶಕರು ಹಾಗೂ ಆನೇಕಲ್ ನ ಮನೆ ಮಗನಾದ ಡಾ|| ಯೋಗಾನಂದ ರೆಡ್ಡಿರವರು ತಾನು ಹುಟ್ಟಿದ ಊರಿಗೆ ಏನಾದರೂ ಸೇವೆ ಮಾಡಬೇಕು, ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಕಾಪಾಡಬೇಕು ಎಂಬುವ ಉದ್ದೇಶದಿಂದ ಈಗಾಗಲೇ ಬೆಂಗಳೂರಿನ ಹೆಚ್.ಎಸ್.ಆರ್ ನಲ್ಲಿ ಈಗಾಗಲೇ ಬೆಂಗಳೂರು ಗ್ಯಾಸ್ಟ್ರೋ ಸೆಂಟರ್ ನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಿದ್ದು ಇಂದು ಡಾ ಯೋಗಾನಂದ ರೆಡ್ಡಿ ರವರು ಆನೇಕಲ್ ಶ್ರೀರಾಮ ಕುಟೀರದಲ್ಲಿ ಪ್ರಥಮ ಬಾರಿಗೆ ಡೈಜೆಸ್ಟಿವ್ ಹೆಲ್ತ್ ಶಿಭಿರವನ್ನು ಉಚಿತವಾಗಿ ಏರ್ಪಡಿಸಿದ್ದು ಸಾರ್ವಜನಿಕರು ಈ ಶಿಭಿರದಲ್ಲಿ ದೊರೆಯುವ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಇನ್ನು ಡೈಜೆಸ್ಟಿವ್ ಹೆಲ್ತ್ ಶಿಭಿರದಲ್ಲಿ ರೋಗಿಗಳಿಗೆ ಪೌಷ್ಠಿಕಾಂಶ ಸಲಹೆ, ರಕ್ತ ತಪಾಸಣೆ, ಆರೋಗ್ಯ ತಪಾಸಣೆ, ಎಂಡೋಸ್ಕೋಪಿ ಮತ್ತು ಗ್ಯಾಸ್ಟಿಕ್ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಸಂಬಂದಿಸಿದ ಎಲ್ಲಾ ಖಾಯಿಲೆಗಳಿಗೆ ಸ್ಥಳದಲ್ಲಿಯೇ ನುರಿತ ವೈದ್ಯರಿಂದ ಪರೀಕ್ಷೆ ನಡೆಸಿ ಔಷದಿಗಳನ್ನು ಸಹ ಉಚಿತವಾಗಿ ನೀಡಲಾಯಿತು. ಒಟ್ಟಾರೆಯಾಗಿ ಸುಮಾರು ೨೩೦ ಜನರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಯತೀಶ್ರೀ ರಮಾಪ್ರಿಯಾಂಬ, ಡಾ ಶೈಲಜಾರೆಡ್ಡಿ, ಡಾತೇಜಸ್ವಿನಿ, ಡಾ.ರಿತು, ಡಾ.ದೇವಾಂಶ, ಬಿಜೆಪಿ ಪಕ್ಷದ ನಾಯನಹಳ್ಳಿ ಮುನಿರಾಜುಗೌಡ, ಬಿ.ಎನ್.ನಾಗರಾಜ್, ನರಸಿಂಹರೆಡ್ಡಿ, ಯಂಗಾರೆಡ್ಡಿ,ಯಾರಂಡಹಳ್ಳಿ ಲಷ್ಮೀ ಕಾಂತ್.ರಘು, ಸುರೇಶ್ ಬಾಬು. ಮುತ್ತೂರು ನಾರಾಯಣಪ್ಪ, , ರಾಮಕೃಷ್ಣ, ಭರತ್, ಮತ್ತು ಸ್ಥಳೀಯ ಮುಖಂಡರುಗಳು ಬಾಗವಹಿಸಿದ್ದರು.