ಡೇಟಿಂಗ್ ಆಪ್ ವಂಚನೆ೬ ಮಂದಿ ಸೆರೆ

ಲಕ್ನೋ(ಉತ್ತರ ಪ್ರದೇಶ),ಆ.೯- ಸಲಿಂಗಕಾಮಿಗಳ ಡೇಟಿಂಗ್ ಆಪ್ ಬಳಸಿಕೊಂಡು ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಅನ್ನು ಕಲ್ಯಾಣಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದಿಲೀಪ್ ಅಲಿಯಾಸ್ ಪ್ರದ್ಯುಮ್ನ್ ಸಿಂಗ್ (೨೧), ಅರುಣ್ ರಜಪೂತ್ (೨೨), ವಿಪಿನ್ ಸಿಂಗ್ (೨೧), ಪವನ್ ಕುಮಾರ್ ಸಿಂಗ್ (೨೨), ಪ್ರವೀಣ್ ಸಿಂಗ್ (೨೦) ಹಾಗೂ ಬ್ರಿಜೇಂದ್ರ ಸಿಂಗ್ (೧೯) ಬಂಧಿತ ಗ್ಯಾಂಗ್‌ನ ಆರೋಪಿಗಳಾಗಿ ದ್ದಾರೆ.
ಸಲಿಂಗಕಾಮಿ ಡೇಟಿಂಗ್ ಆ?ಯಪ್ ‘ಬ್ಲೂಡ್ನಲ್ಲಿ ಆರೋಪಿಗಳು ನಕಲಿ ಖಾತೆಗಳನ್ನು ರಚಿಸಿ ಯುವಕರನ್ನು ವಂಚಿಸುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಲಖನ್ ಸಿಂಗ್ ಯಾದವ್ ತಿಳಿಸಿದ್ದಾರೆ.
ಆರೋಪಿಗಳು ಗೇ ಡೇಟಿಂಗ್ ಆಪ್‌ನಲ್ಲಿ ಅಮಾಯಕ ಯುವಕರೊಂದಿಗೆ ಚಾಟ್ ಮಾಡಿ ಬಳಿಕ ಡೇಟಿಂಗ್‌ಗೆ ಕರೆಯುತ್ತಿದ್ದರು. ಬಂದ ಯುವಕರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಬೆತ್ತಲೆ ವೀಡಿಯೋಗಳನ್ನು ಶೂಟ್ ಮಾಡಿದ್ದಾರೆ. ತದನಂತರ ಯುವಕರಿಂದ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.
ಬೆತ್ತಲೆ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ, ಅವರ ಫೋನ್ ಬಳಸಿ ಯುಪಿಐ ಮೂಲಕ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿ ವಂಚನೆಗೆ ಒಳಗಾದ ಯುವಕನೊಬ್ಬ ಪೊಲೀಸರನ್ನು ಸಂಪರ್ಕಿಸಿ ತನ್ನ ನಗ್ನ ವೀಡಿಯೋಗಳನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದಾಗಿ ದೂರು ನೀಡಿದ್ದಾನೆ.ಈ ಬಗ್ಗೆ ಕಲ್ಯಾಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಯುವಕನಿಂದ ಮಾಹಿತಿ ಪಡೆದ ಪೊಲೀಸರು ವಂಚನೆಯಲ್ಲಿ ತೊಡಗಿದ್ದ ೬ ಜನರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.