ಡೆಲ್ಲಿ ವಿರುದ್ಧ ರಾಜಸ್ಥಾನಕ್ಕೆ ಮೂರು ವಿಕೆಟ್ ಗಳ ಗೆಲುವು

ಮುಂಬೈ, ಏ. 15- ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ‌ ವಿರುದ್ದ ರಾಜಸ್ಥಾನ ರಾಯಲ್ಸ್ ಮೂರು ವಿಕೆಟ್ ಗಳಿಂದ ಜಯ ಗಳಿಸಿತು.
ಮೊದಲ ಪಂದ್ಯದಲ್ಲಿ ಸೋತಿದ್ದ ರಾಜಸ್ಥಾನ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಸಫಲವಾಯಿತು.


ಗೆಲುವಿಗೆ ಅಗತ್ಯವಿದ್ದ 148 ರನ್ ಗಳ ಬೆನ್ನಹತ್ತಿದ ರಾಜಸ್ಥಾನ ರಾಯಲ್ಸ್, ಕೇವಲ 13 ರನ್ ಆಗುವಷ್ಟರಲ್ಲಿ ನಾಯಕ ಸಂಜು ಸ್ಯಾಮ್ಸನ್ ಸೇರಿದಂತೆ ಮೂರು ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತು.ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ಸಂಜು ಕೇವಲ ನಾಲ್ಕು ರನ್ ಗಳಿಸಿ ನಿರಾಸೆ ಮೂಡಿಸಿದರು.
ಡೇವಿಡ್ ಮಿಲ್ಲರ್ 43 ಎಸೆತಗಳಲ್ಲಿ 7 ಬೌಂಡರಿ‌ ಹಾಗೂ ಎರಡು ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿದರು.
ಒಂದು ಹಂತದಲ್ಲಿ 104 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸೋಲಿನ‌ ದವಡೆಗೆ ಸಿಲುಕಿತ್ತು.ಆದರೆ ಕ್ರಿಸ್ ಮೊರಿಸ್ 18 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಬಾರಿಸಿ ಅಜೇಯ 36 ರನ್ ಗಳಿಸಿ ಇನ್ನೂ ಎರಡು ಎಸೆತಗಳು ಬಾಕಿಯಿರುವಾಗಲೇ ರಾಜಸ್ಥಾನ ಗೆಲುವಿನ ನಗೆ ಬೀರಿತು. ಉನ್ನಡ್ಕಟ್ ಅಜೇಯ 11 ರನ್ ಗಳಿಸಿದರು.
ಅವೇಶ್ ಖಾನ್ ಮೂರು, ರಬಾಡ ಹಾಗೂ ವೋಕ್ಸ್ ತಲಾ ಎರಡು ವಿಕೆಟ್ ಗಳಿಸಿದರು.
ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ,ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಗರ ತತ್ತರಿಸಿತು. 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಗಳ ಸಾಧರಣ ಮೊತ್ತ ದಾಖಲಿಸಿತು.
ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.‌ನಾಯಕ ರಿಷಬ್ ಪಂತ್ 51 ರನ್ ಗಳಿಸಿದ್ದನ್ನು ಬಿಟ್ಟರೆ, ಪೃಥ್ವಿ ಶಾ, ಧವನ್ ಸೇರಿದಂತೆ ಇತರ ಆಟಗಾರರು ಉತ್ತಮ‌ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು. ಲಲಿತ್ ಯಾದವ್ 20 ಹಾಗೂ ಟಾಮ್ ಕುರ್ರನ್ 21 ರನ್ ಗಳಿಸಿದರು.
ಉನ್ನಡ್ಕಟ್ ಮೂರು ಹಾಗೂ ಮುಸ್ದಾಫಿಜೂರ್ ಎರಡು ವಿಕೆಟ್ ಪಡೆದರು.

ಸ್ಕೋರ್ ವಿವರ
ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕೆ 147
ರಾಜಸ್ಥಾನ ರಾಯಲ್ಸ್ 19.4 ಓವರ್ ಗಳಲ್ಲಿ 7 ವಿಕೆಟ್ ಗೆ 150