ಡೆಲ್ಲಿ ವಿರುದ್ಧ ಆರ್ ಸಿಬಿಗೆ ಒಂದು ರನ್ ರೋಚಕ ಜಯ: ಎಬಿಡಿ ಭರ್ಜರಿ‌‌ ಬ್ಯಾಟಿಂಗ್

ಅಹಮದಾಬಾದ್, ಏ 27- ಇಲ್ಲಿನ‌ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ನ‌ 22 ನೇ ಪಂದ್ಯದಲ್ಲಿ ಆರ್ ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ರನ್ ಗಳಿಂದ
ರೋಚಕ ಜಯ ದಾಖಲಿಸಿತು.
ಸಿಎಸ್ ಕೆ ವಿರುದ್ದ ಹೀನಾಯ ಸೋಲು ಅನುಭವಿಸಿದ್ದ ಆರ್ ಸಿಬಿ ಈ ಪಂದ್ಯದಲ್ಲಿ ಜಯಗಳಿಸಲು ಯಶಸ್ವಿಯಾಯಿತು..
172 ರನ್ ‌ಗಳ ಬೆನ್ನಹತ್ತಿದ ಪಂತ್ ಪಡೆ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗೆ 170 ರನ್ ಬಾರಿಸಿ ಕೇವಲ ಒಂದು ರನ್ ನಿಂದ ಸೋಲು ಅನುಭವಿಸಿತು.
ನಾಯಕ ಪಂತ್ 58 ಹಾಗೂ ಹೆಟ್ಮಿಯರ್ 53 ರನ್ ಗಳಿಸಿ ಅಜೇಯರಾಗುಳಿದರು.ಆದರೂ ತಂಡವನ್ನು ಗೆಲ್ಲಿಸಿಕೊಂಡು ಬರಲಾಗಲಿಲ್ಲ. ಹೀಗಾಗಿ ಇವರಿಬ್ಬರ ಆಟ ವ್ಯರ್ಥವಾಯಿತು.ಪೃಥ್ವಿ ಶಾ 21 ಹಾಗೂ ಮಾರ್ಕಸ್ 22 ರನ್ ಗಳಿಸಿದರು.
ಆರ್ ಸಿಬಿ ಹೆಚ್ವು ಅಂತರದಿಂದ ಗೆಲುವು ಸಾಧಿಸುವ ಅವಕಾಶವಿತ್ತು. ಪಡಿಕ್ಕಲ್ ಕ್ಯಾಚ್ ಕೈಚೆಲ್ಲಿದರು. ಜತೆಗೆ ಫೀಲ್ಡಿಂಗ್ ನಲ್ಲಿ ಎಡವಿದ್ದರಿಂದ ಪಂದ್ಯ ಕಡೆಯವರೆಗೂ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಕೊಹ್ಲಿ ಪಡೆ ಗೆಲುವಿನ ನಗೆ ಬೀರಿದರೆ, ಡೆಲ್ಲಿ ನಾಲ್ಕನೇ ಪಂದ್ಯ ಗೆಲ್ಲುವ ಕನಸು ಭಗ್ನಗೊಂಡಿತು.
ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 171 ರನ್ ಗಳ ಸವಾಲಿನ ಮೊತ್ತವನ್ನು ದಾಖಲಿಸಿತು.


ಎಬಿಡಿ ವಿಲಿಯರ್ಸ್ 42 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ಬಾರಿಸಿ ಅಜೇಯ 72 ರನ್ ಬಾರಿಸಿ ತಂಡದ ಮೊತ್ತವನ್ನು 170 ರ ಗಡಿ‌ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ರಜತ್ ಪಟ್ಟಿದರ್ 31, ಮ್ಯಾಕ್ಸ್ ವೆಲ್ 25, ಪಡಿಕ್ಕಲ್ 17 ಹಾಗೂ ಕೊಹ್ಲಿ 12 ರನ್ ಗಳಿಸಿದರು.